ಗುರುವಾರ , ಜನವರಿ 23, 2020
28 °C

ಕುಣಿಗಲ್‌ ಪಟ್ಟಣಕ್ಕೆ ಬಂದ ಚಿರತೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್‌: ಪಟ್ಟಣದ ದಿವ್ಯಾ ಕನ್ವೆನ್ಷನ್‌ ಹಾಲ್‌ ಸಮೀಪ ಕಟ್ಟಿದ್ದ ಕರುಗಳ ಮೇಲೆ ಭಾನುವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿದ್ದು, ನಾಗರಿಕರಲ್ಲಿ ಭೀತಿ ಮೂಡಿಸಿದೆ. ವಾನಂಬಾಡಿ ಕಾಲೊನಿಯ ಗೋಂವಿದ­­ರಾಜು ಮನೆ ಮುಂದೆ ಹಸು ಹಾಗೂ ಕರುಗಳನ್ನು ಕಟ್ಟಲಾಗಿತ್ತು. ಮುಂಜಾನೆ ದಾಳಿ ನಡೆಸಿರುವ ಚಿರತೆ ಎರಡು ಕರುಗಳನ್ನು ಸಮೀಪದ ಗದ್ದೆ ಬಯಲಿಗೆ ಎಳೆದೊಯ್ದು ತಿಂದು ಪರಾರಿಯಾಗಿದೆ.ಇದುವರೆಗೂ ಪಟ್ಟಣದ ಸುತ್ತ­ಮುತ್ತಲಿನ ವಿವಿಧ ಗ್ರಾಮಗಳಲ್ಲಿ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆ­ಸುತ್ತಿದ್ದು, ಇದೀಗ ಪಟ್ಟಣದ ಹೊರ ವಲಯದಲ್ಲಿ ಕಾಣಿಸಿಕೊಂಡಿರುವುದು ನಾಗರಿಕರ ಆತಂಕ ಹೆಚ್ಚಿಸಿದೆ.ಕಳೆದ ವಾರವಷ್ಟೇ ಪಟ್ಟಣ ಸಮೀಪದ ಗಂಗೇನಹಳ್ಳಿಯಲ್ಲಿ ಕುದುರೆಯನ್ನು ಚಿರತೆ ಬಲಿ ಪಡೆದಿತ್ತು.

ಪ್ರತಿಕ್ರಿಯಿಸಿ (+)