ಸಿದ್ದಾಪುರ: ಅಮ್ಮತ್ತಿಯಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ `ಐಚ್ಚೆಟ್ಟಿರ ಹಾಕಿ ಕಪ್-2012~ ಕೌಟುಂಬಿಕ ಹಾಕಿ ಪಂದ್ಯಾವಳಿಯ ಆರನೇ ದಿನವಾದ ಗುರುವಾರ ನಡೆದ ಪಂದ್ಯಗಳು ವಿವಿಧ ದಾಖಲೆಗಳಿಗೆ ಸಾಕ್ಷಿಯಾದವು.

ಕುಪ್ಪಣಮಾಡ ತಂಡ ಹಾಗೂ ಉಳ್ಳಿಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಣಮಾಡ ತಂಡ ಉಳ್ಳಿಯಡ ತಂಡದ ವಿರುದ್ಧ 7 ಗೋಲುಗಳನ್ನು ದಾಖಲಿಸಿ ಅತಿ ಹೆಚ್ಚು ಗೋಲು ಗಳಿಸಿದ ತಂಡವೆಂಬ ಕೀರ್ತಿಗೆ ಪಾತ್ರವಾಯಿತು.

ಚಕ್ಕೇರ-ಅಮ್ಮೆಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಕ್ಕೇರ ತಂಡ 5-0 ಗೋಲುಗಳ ಅಂತರದಲ್ಲಿ ಅಮ್ಮೆಕಂಡ ತಂಡವನ್ನು ಪರಾಭವಗೊಳಿಸಿತು. 1ನೇ ಮೈದಾನದಲ್ಲಿ ನಡೆದ ಮತ್ತೂಂದು ಪಂದ್ಯದಲ್ಲಿ ಅಲ್ಲಂಡ ತಂಡ ಅಪ್ಪಂದೇರಂಡ ತಂಡದ ವಿರುದ್ಧ 3-0 ಗೋಲುಗಳ ಜಯ ದಾಖಲಿಸಿತು.

ಚೆರಿಯಂಡ ಹಾಗೂ ಅಪ್ಪನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಪ್ಪನೆರವಂಡ ತಂಡ 4-1 ಅಂತರದಲ್ಲಿ ಚೆರಿಯಂಡ ತಂಡವನ್ನು ಸೋಲಿಸಿತು. ಸಣ್ಣುವಂಡ ಹಾಗೂ ಅಣ್ಣೀರ ತಂಡಗಳ ನಡೆಯಬೇಕಿದ್ದ ಪಂದ್ಯಕ್ಕೆ ಅಣ್ಣೀರ ತಂಡ ಗೈರು ಹಾಜರಾದ ಕಾರಣ ಸಣ್ಣುವಂಡ ತಂಡ ವಾಕ್-ಓವರ್ ಮೂಲಕ ಮುಂದಿನ ಸುತ್ತಿನ ಪಂದ್ಯಕ್ಕೆ ಅರ್ಹವಾಯಿತು.

ಬೊಳ್ಳೇರ ಹಾಗೂ ಅವರೆಮಾದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅವರೆಮಾದಂಡ ತಂಡ ಬೊಳ್ಳೇರ ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಕುಟ್ಟೇಟಿರ ತಂಡ ಹಾಗೂ ಮಾಪಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ನಂತರ ನಡೆದ ಟೈ-ಬ್ರೇಕರ್ನಲ್ಲಿ ಕುಟ್ಟೇಟಿರ ತಂಡ 4-1 ಅಂತರದ ಜಯ ಸಾಧಿಸಿತು.

ಬೊಳ್ಳಜಿರ-ಮೂಕಳಮಾಡ ತಂಡಗಳ ನಡುವೆ ನಡೆದ ಪಂದ್ಯಕ್ಕೆ ಬೊಳ್ಳಜಿರ ತಂಡ ಗೈರು ಹಾಜರಾದ ಕಾರಣ ವಾಕ್-ಓವರ್ ಮೂಲಕ ಮೂಕಳಮಾಡ ತಂಡ ವಿಜೇತ ತಂಡವೆಂದು ಘೋಷಿಸಲಾಯಿತು. ಅಲೆಮಾಡ ಹಾಗೂ ಮೇರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಸಮಯದಲ್ಲಿ ತಲಾ ಒಂದೊಂದು ಗೋಲುಗಳ ಸಮಬಲ ದಾಖಲಿಸಿದವು. ಸಡ್ಡನ್-ಡೆತ್ಗೆ ಸಾಗಿದ ಪಂದ್ಯದಲ್ಲಿ ಮೇರಿಯಂಡ ತಂಡ ಜಯ ಗಳಿಸಿತು.

ಮೈದಾನ 2ರಲ್ಲಿ ನಡೆದ ಕುಪ್ಪಂಡ ಹಾಗೂ ಮುಂಜಾಂದಿರ ಪಂದ್ಯದಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಮುಂಜಾಂದಿರ ತಂಡ ಎದುರಿಲ್ಲದ 6 ಗೋಲುಗಳನ್ನು ದಾಖಲಿಸಿ ವಿಜೇತವಾಯಿತು. ಬಯವಂಡ-ಬಾಚಿನಾಡಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಬಯವಂಡ ತಂಡ ಗೈರು ಹಾಜರಾದ ಕಾರಣ ವಾಕ್-ಓವರ್ ಮೂಲಕ ಬಾಚಿನಾಡಂಡ ತಂಡವನ್ನು ವಿಜೇತವೆಂದು ಘೋಷಿಸಲಾಯಿತು.

ಕುಲ್ಲೆಟ್ಟಿರ ಹಾಗೂ ಕುಂಡ್ರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೆಟ್ಟಿರ ತಂಡ 4-0 ಗೋಲುಗಳ ಜಯ ಸಾಧಿಸಿತು. ಮೈದಾನ 1ರಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಚೆರಿಯಪಂಡ ತಂಡ ಕುಂದೀರ ತಂಡವನ್ನು1-2 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಇಂದು ನಡೆದ ಪಂದ್ಯಗಳಲ್ಲಿ ಭಾಗವಹಿಸಿದ ಒಟ್ಟು 23 ತಂಡಗಳಲ್ಲಿ 13 ತಂಡಗಳು ಮುಂದಿನ ಸುತ್ತಿಗೆ ಅರ್ಹರಾದರೆ 3 ತಂಡಗಳು ವಾಕ್-ಓವರ್ ನೀಡಿ ಪಂದ್ಯಾವಳಿಯಿಂದ ಹೊರಗೆ ಉಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.