ಗುರುವಾರ , ಜನವರಿ 23, 2020
26 °C

ಕುಶವಾ ಸದಸ್ಯತ್ವ ಅಮಾನತಿನಲ್ಲಿ: ಬಿಜೆಪಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ಕಳಂಕಿತ ಮಾಜಿ ಸಚಿವ ಬಾಬು ಸಿಂಗ್ ಕುಶವಾ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿರುವುದಕ್ಕೆ ತೀವ್ರ ಟೀಕೆಗಳನ್ನು ಎದುರಿಸಿದ್ದ ಬಿಜೆಪಿಯು ಅವರ ಸದಸ್ವತ್ಯವನ್ನು ಅಮಾನತಿನಲ್ಲಿಡಲು ನಿರ್ಧರಿಸಿದೆ.

ಗ್ರಾಮೀಣ ಆರೋಗ್ಯ ಹಗರಣದಲ್ಲಿ ನಿರ್ದೋಷಿ ಎಂದು ಸಾಬೀತು ಆಗುವವರೆಗೂ ತಮ್ಮ ಸದಸ್ಯತ್ವವನ್ನು ಅಮಾನತಿನಲ್ಲಿಡುವಂತೆ ಸ್ವತಃ ಕುಶವಾ ಮಾಡಿರುವ  ಮನವಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅಂಗೀಕರಿಸಿದ್ದಾರೆ ಎಂದು  ಬಿಜೆಪಿ ವಕ್ತಾರರಾದ ಶಹ್ನಾವಾಜ್ ಹುಸೇನ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇತರ ಹಿಂದುಳಿದ ವರ್ಗಗಳ ನಾಯಕ ಮತ್ತು ಮಾಜಿ ಸಚಿವ ಕುಶವಾ ಅವರನ್ನು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)