ಗುರುವಾರ , ಮೇ 13, 2021
16 °C

ಕುಶಾವ ಸೇರ್ಪಡೆ ವರಿಷ್ಠರ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಕಳಂಕಿತ ಬಿಎಸ್‌ಪಿ ಸಚಿವ ಬಾಬು ಸಿಂಗ್ ಕುಶಾವ ಅವರನ್ನು ಬಿಜೆಪಿಗೆ ಸೇರಿಸಿಕೊಂಡದ್ದು ತಮ್ಮ ಅಧಿಕಾರಾವಧಿಯಲ್ಲಿನ ಕಪ್ಪುಚುಕ್ಕೆಯಾಗಿದ್ದು, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡಲು ಇದೇ ಕಾರಣ ಎಂದು ಸೂರ್ಯ ಪ್ರತಾಪ್ ಶಾಹಿ ಸ್ಪಷ್ಟಪಡಿಸಿದ್ದಾರೆ.ಪಕ್ಷದ ನೂತನ ರಾಜ್ಯ ಅಧ್ಯಕ್ಷ ಲಕ್ಷ್ಮಿಕಾಂತ್ ಬಾಜಪೇಯಿ ಅವರ ಸ್ವಾಗತ ಸಮಾರಂಭದಲ್ಲಿ ಸೋಮವಾರ ರಾಜೀನಾಮೆ ಕುರಿತು ಮೌನ ಮುರಿದ ಶಾಹಿ, ಕುಶಾವ ಸೇರ್ಪಡೆ ಪಕ್ಷದ ವರಿಷ್ಠರ ನಿರ್ಧಾರವಾಗಿತ್ತಲ್ಲದೆ ಅದರಲ್ಲಿ ತಮ್ಮ ಪಾತ್ರವೇನೂ ಇರಲಿಲ್ಲ ಎಂದು ಹೇಳಿದರು.ಪತ್ರಿಕಾಗೋಷ್ಠಿ ನಡೆಯುವ ಕೇವಲ ಎರಡು ಗಂಟೆಗಳ ಮೊದಲು ಕುಶಾವ ಸೇರ್ಪಡೆ ಕುರಿತು ತಮಗೆ ಮಾಹಿತಿ ನೀಡಲಾಯಿತು. ಆದರೆ ಚುನಾವಣೆ ಸಮೀಪಿಸುತ್ತಿದ್ದುದರಿಂದ ಪಕ್ಷದ ವರ್ಚಸ್ಸಿಗೆ ಕುಂದುಂಟು ಮಾಡದಿರುವ ಸಲುವಾಗಿ ತಾವು ಚಕಾರ ಎತ್ತಲಿಲ್ಲ ಎಂದರು.ನನ್ನ ಅಧಿಕಾರಾವಧಿಯಲ್ಲಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದೇನೆ. ಸತ್ಯವನ್ನು ಹೊರಗೆಡಹಲು ಇದು ತಕ್ಕ ಸಮಯ ಎಂದೆಣಿಸಿ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದೇನೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.