ಎಂ.ಕೆ.ಹುಬ್ಬಳ್ಳಿ (ಚನ್ನಮ್ಮನ ಕಿತ್ತೂರು): ಇಲ್ಲಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿಯೊಂ ದರ ಹಿಂಬದಿಯ ಗೋಡೆ ಬುಧವಾರ ಬೆಳಿಗ್ಗೆ ಕುಸಿದು ಬಿದ್ದಿದೆ.

ಬೆಳಗಿನ ಜಾವ ಸುಮಾರು 4 ಗಂಟೆಗೆ ಕುಸಿದ ಪರಿಣಾಮ ಯಾವುದೇ ಪ್ರಾಣ ಹಾನಿಯಾಗಿಲ್ಲ.
`ಏಳೆಂಟು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಎರಡು ಕೊಠಡಿಗಳಲ್ಲಿ ಈಗ ಒಂದರ ಗೋಡೆಯು ಕುಸಿದು ಬಿದ್ದಿದ್ದು, ಇದರ ಪಕ್ಕಕ್ಕಿರುವ ಇನ್ನೊಂದು ಕೋಣೆಯೂ ಸಹ ಬೀಳಲು ದಿನ ಎಣಿಸುತ್ತಿದೆ~ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

`ಈ ಕೊಠಡಿಯಲ್ಲಿ 2ನೇ ತರಗತಿಯ 30 ಮಕ್ಕಳು ಓದುತ್ತಾರೆ. ಶಾಲೆಯ ವೇಳೆಯಲ್ಲಿ ಈ ಘಟನೆ ಸಂಭವಿಸಿಲ್ಲ.ಮಕ್ಕಳು ಸೇರಿದಂತೆ ಎಲ್ಲರ ಅದೃಷ್ಟವಿದು. ನನ್ನ ಮಗ ಸಹ ಇದೇ ಕೊಠಡಿಯಲ್ಲಿ ಓದುತ್ತಿದ್ದ~ ಎಂದು ನಿಟ್ಟುಸಿರು ಬಿಟ್ಟರು ಶಿಕ್ಷಕಿ ನುಸ್ರತ್ ಬೇಗಂ.

`ಯಾವ ಯೋಜನೆಯಲ್ಲಿ ಈ ಕೊಠಡಿಗಳ ನಿರ್ಮಾಣವಾಗಿದೆ ಎಂದು ಯಾರಿಗೂ ಗೊತ್ತಿಲ್ಲ.
ಗುತ್ತಿಗೆದಾರ ಮಾಡಿದ ಕಳಪೆ ಕಾಮಗಾರಿಯಿಂದ ಹೀಗಾಗಿದೆ. ಇದಕ್ಕೆ ಯಾರು ಹೊಣೆ?~ ಎಂದು ಪ್ರಶ್ನಿಸಿದವರು ಹಿದಾಯುತುಲ್ಲಾ ಜಮಾದಾರ.

ಬಹಳ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕೊಠಡಿಗಳ ಇಲ್ಲಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಲಾದ ಕೊಠಡಿ ಕತೆ ಹೀಗಾಗಿದೆ. ಇದಕ್ಕೆ ಹೊಂದಿಕೊಂಡಿರುವ ಕೊಠಡಿ ಕಾಮಗಾರಿಯೂ ಗುಣಮಟ್ಟದಿಂದ ಕೂಡಿಲ್ಲ. ಇದನ್ನು ಸಹ ನಾಶ ಪಡಿಸಬೇಕು~ ಎಂದು ಅವರು ಅಭಿಪ್ರಾಯಪಟ್ಟರು.

ಕಿತ್ತೂರಲ್ಲಿ ಮಳೆಗಾಗಿ ಪ್ರಾರ್ಥಿಸಿ `ವಾರಾ~ ನಾಳೆ
ಚನ್ನಮ್ಮನ ಕಿತ್ತೂರು: ಸಮರ್ಪಕವಾಗಿ ಸುರಿಯದಿರುವ ಮುಂಗಾರು ಮಳೆಯಿಂದ ಕಂಗೆಟ್ಟಿರುವ ಸ್ಥಳೀಯ ಗ್ರಾಮಸ್ಥರು ಇದೇ ಶುಕ್ರವಾರ ಒಂದು ದಿನದ ಕಟ್ಟು ನಿಟ್ಟಿನ `ವಾರಾ~ ಬಿಡಲು ನಿರ್ಧರಿಸಿದ್ದಾರೆ.

`ಅಂದು ಎಣ್ಣೆಯಲ್ಲಿ ತಿಂಡಿ, ತಿನಿಸುಗಳನ್ನು ಕರಿಯುವಂತಿಲ್ಲ, ರೊಟ್ಟಿ ತಟ್ಟುವಂತಿಲ್ಲ~ ಎಂದು ಧ್ವನಿವರ್ಧಕ ಮೂಲಕ ಪಟ್ಟಣದಲ್ಲಿ ಸಾರಲಾಗಿದೆ.

ಅದೇ ದಿನ ಇಲ್ಲಿಗೆ ಸಮೀಪವಿರುವ ಗುಡ್ಡದ ಕರೆಮ್ಮನ ಗುಡಿಗೆ ಗ್ರಾಮಸ್ಥರು ಮತ್ತು ಕುಂಭ ಹೊತ್ತ ಮಹಿಳೆಯರು ತೆರಳಿ ರುದ್ರಾಭಿಷೇಕ ಹಾಗೂ ಹೋಮಗಳ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಲಿದ್ದಾರೆ. ಅನಂತರ ಅನ್ನ ಪ್ರಸಾದ ಏರ್ಪಡಿಸಲಾಗಿದೆ.

`ಊರಿನ ಸಮಸ್ತ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕು~ ಎಂದು ಪ್ರಕಟಣೆ ಮೂಲಕ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.