ಕುಸ್ತಿಯಲ್ಲಿ ನಡೆಯುವುದೇ ಕಮಾಲ್?

ಆಧುನಿಕ ಒಲಿಂಪಿಕ್ಸ್ ಶುರುವಾದ ನಂತರ ಇಲ್ಲಿಯವರೆಗೆ ಭಾರತ ಒಟ್ಟು 24 ಪದಕಗಳನ್ನು ಜಯಿಸಿದೆ. ಹಾಕಿಯಲ್ಲಿ ಬಂದ 11 ಪದಕಗಳನ್ನು ಹೊರತು ಪಡಿಸಿದರೆ ಇನ್ನುಳಿದ ಕ್ರೀಡೆಗಳಲ್ಲಿ ಹೆಚ್ಚು ಪದಕಗಳು ಬಂದಿದ್ದು ಕುಸ್ತಿಯಲ್ಲಿ.
ಹಿಂದಿನ ಮೂರೂ ಒಲಿಂಪಿಕ್ಸ್ಗಳ ಕುಸ್ತಿಯಲ್ಲಿ ಭಾರತ ಒಂದಲ್ಲಾ ಒಂದು ಪದಕ ಜಯಿಸಿದೆ. ಇದೀಗ ಆಗಸ್ಟ್ 21ರ ವರೆಗೆ ಕುಸ್ತಿ ಸ್ಪರ್ಧೆಗಳು ನಡೆಯಲಿದ್ದು ಹಿಂದಿನ ಸಾಧನೆಯ ಪರಂಪರೆ ಮುಂದುವರಿಯುವುದೇ ಎನ್ನುವ ಕುತೂಹಲವಿದೆ.
ಒಲಿಂಪಿಕ್ಸ್ ‘ಕುಸ್ತಿ’ಯಲ್ಲಿ ಗೆಲ್ಲುವರೇ ಯಾದವ್?
ನಿಷೇಧಿತ ಉದ್ದೀಪನಾ ಮದ್ದು ಸೇವನೆ ವಿವಾದದ ‘ಕುಸ್ತಿ’ಯಲ್ಲಿ ಗೆದ್ದು ರಿಯೊಗೆ ಬಂದಿರುವ ನರಸಿಂಗ್ ಪಂಚಮ್ ಯಾದವ್ ಅವರ ಪಂದ್ಯ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಯಾದವ್ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಪೈಪೋಟಿ ನಡೆಸಲಿದ್ದಾರೆ. ಹೋದ ವರ್ಷ ಲಾಸ್ ವೆಗಾಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚು ಜಯಿಸಿ ರಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು. ಆಗಸ್ಟ್ 19ರಂದು ಯಾದವ್ ಅವರ ಮೊದಲ ಪಂದ್ಯ ನಡೆಯಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.