ಸೋಮವಾರ, ಮಾರ್ಚ್ 8, 2021
31 °C

ಕುಸ್ತಿ: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಸ್ತಿ: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತದ ಸಾಕ್ಷಿ

ರಿಯೊ ಡಿ ಜನೈರೊ: ಕೊನೆಗೂ ಭಾರತದ ತ್ರಿವರ್ಣ ಧ್ವಜವನ್ನು ಭಾರತದ ಸ್ವರ್ಧಿಯೊಬ್ಬರು ಎತ್ತಿ ಹಿಡಿದರು.ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ  ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.ಆರಂಭದಲ್ಲಿ ಐಸುಲು 5 ಪಾಯಿಂಟ್‌ ಗಳಿಂದ ಮುಂದಿದ್ದರು. 2 ನಿಮಿಷ 20 ಸೆಕೆಂಡುಗಳಾಗಿದ್ದಾಗ 3 ಪಾಯಿಂಟ್‌ ಗಳಿಂದ ಮುಂದಿದ್ದ ಐಸುಲು ನಂತರ 27 ಸೆಕೆಂಡುಗಳಲ್ಲಿ ಮತ್ತೆ 2 ಪಾಯಿಂಟ್ಸ್‌ ಗಳಿಸಿದರು.  ಸಾಕ್ಷಿ ಸೋತರು ಎಂದು ಕೊಳ್ಳುತ್ತಿರುವಾಗಲೇ, ಸಾಕ್ಷಿ ಎರಡು ಸಲ ಸತತ 2 ಪಾಯಿಂಟ್ಸ್‌ ಗಳಿಸಿದರು. 5 ನಿಮಿಷ 51 ಸೆಕೆಂಡುಗಳಾಗಿದ್ದಾಗ ಇಬ್ಬರೂ ತಲಾ 5 ಪಾಯಿಂಟ್ಸ್‌ ಗಳಿಸಿದ್ದರು.ಹಣಾಹಣಿ ಮುಗಿಯಲು ಇನ್ನು 9 ಸೆಕೆಂಡ್‌ಗಳಿವೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಸ್‌ ಗಳಿಸಿ ಗೆಲುವಿನ ನಗೆ ಚೆಲ್ಲಿದರು. ಭಾರತದ ಪಾಳಯದಲ್ಲಿ ಸಂಭ್ರಮದ ಅಲೆ ಎದ್ದಿತು. ಸಾಕ್ಷಿಯ ಕೋಚ್‌ ತಮ್ಮ ಶಿಷ್ಯೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಅಖಾಡ ದಲ್ಲಿ ಕುಣಿದಾಡಿದರು.ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಭಾರತಕ್ಕೆ ಬಂದ ಐದನೇ ಪದಕವಿದು. ಹಿಂದೆ ಕೆ.ಡಿ. ಜಾಧವ್‌ (1952), ಸುಶೀಲ್‌ ಕುಮಾರ್‌ (2008 ಮತ್ತು 2012), ಯೋಗೇಶ್ವರ ದತ್‌ (2012) ಪದಕಗಳನ್ನು ಜಯಿಸಿದ್ದರು.ಗ್ಲಾಸ್ಗೊದಲ್ಲಿ ಬೆಳ್ಳಿ: ಸಾಕ್ಷಿ ಮಲಿಕ್‌ ಅವರು  ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ 58 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.2014ರಲ್ಲಿ ತಾಷ್ಕೆಂಟ್‌ ನಲ್ಲಿ ನಡೆದಿದ್ದ  ವಿಶ್ವ ಕುಸ್ತಿ ಚಾಂಪಿ ಯನ್‌ಷಿಪ್‌ನ 60 ಕೆ.ಜಿ. ವಿಭಾಗದಲ್ಲಿ  ಭಾರತದ ಸವಾಲು ಎತ್ತಿಹಿಡಿದಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ 1–3ರಲ್ಲಿ ಪೆಟ್ರಾ ಮಾರಿಟ್‌  ಒಲ್ಲಿ ವಿರುದ್ಧ ಸೋತಿದ್ದರು.2015ರ ದೋಹಾ ಏಷ್ಯನ್‌ ಚಾಂಪಿ ಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು.ಸಾಕ್ಷಿ ಮಲಿಕ್‌ ಪರಿಚಯ

ಜನ್ಮ ದಿನ : 3 ಜನವರಿ 1993  ರೋಹ್ಟಕ್‌, ಹರಿಯಾಣ

ಎತ್ತರ : 5.4 ಅಡಿ

ತೂಕ : 64 ಕೆ.ಜಿ.

ಕೋಚ್‌ : ಈಶ್ವರ್‌ ದಹಿಯಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.