ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಅನುಷ್ಠಾನದಲ್ಲಿ ಅಲ್ಪಸಂಖ್ಯಾತ ಶಾಲೆಗಳ ಕುರಿತ ಗೊಂದಲ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘ (ಕುಸ್ಮಾ) ಕರೆ ನೀಡಿರುವ ಏಳು ದಿನಗಳ ಶಾಲಾ ಬಂದ್ಗೆ ನಗರದ 61 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂಬತ್ತು ಶಾಲೆಗಳು ಮಾತ್ರ ಸ್ಪಂದಿಸಿದವು. ಉಳಿದ ಶಾಲೆಗಳು ಶಾಲಾ ಬಂದ್ ನಡೆಸಲಿಲ್ಲ.

`ಕುಸ್ಮಾ~ ಸಂಘಟನೆಯ ವ್ಯಾಪ್ತಿಯಲ್ಲಿ ನಗರದಲ್ಲಿ 460 ಖಾಸಗಿ ಶಾಲೆಗಳಿವೆ. ಸಂಘಟನೆಯ ಬೇಡಿಕೆಗಳಿಗೆ ಸಹಮತ ಇದೆ. ಆದರೆ ಬಂದ್ ನಡೆಸಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಬೇಡ ಎಂಬ ಕಾರಣಕ್ಕೆ ವಾರಗಳ ರಜಾ ಘೋಷಣೆಯನ್ನು ಕೈ ಬಿಡಲಾಯಿತು~ ಎಂದು ಬಂದ್ನಲ್ಲಿ ಪಾಲ್ಗೊಳ್ಳದ ಶಾಲೆಗಳ ಮುಖ್ಯಸ್ಥರು ತಿಳಿಸಿದರು.

ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ 35 ಶಾಲೆಗಳಲ್ಲಿ ಬಂದ್ ನಡೆಸಲಾಯಿತು. ಬಸವನಗುಡಿ ಸುತ್ತಮುತ್ತ 10, ಮೆಜೆಸ್ಟಿಕ್ನಲ್ಲಿ ಮೂರು, ಜಯನಗರ ವ್ಯಾಪ್ತಿಯಲ್ಲಿ ಆರು, ಕೆ.ಆರ್.ಪುರ ಆಸುಪಾಸಿನಲ್ಲಿ 13 ಶಾಲೆಗಳು, ಆನೇಕಲ್ನಲ್ಲಿ ಎರಡು ಶಾಲೆಗಳು ಬಂದ್ ನಡೆಸಿದವು. ಉತ್ತರ ಶೈಕ್ಷಣಿಕ ಜಿಲ್ಲೆಯ 26 ಶಾಲೆಗಳಲ್ಲಿ ಬಂದ್ ನಡೆಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಒಂಬತ್ತು ಶಾಲೆಗಳು ಮಾತ್ರ ಬಂದ್ನಲ್ಲಿ ಪಾಲ್ಗೊಂಡವು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.`ಸಂಘಟನೆ ಕರೆ ನೀಡಿರುವ ಶಾಲಾ ಬಂದ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಶೇ 90 ಶಾಲೆಗಳು ಬಂದ್ ನಡೆಸಿವೆ~ ಎಂದು ಕುಸ್ಮಾ ಸಂಘಟನೆಯ ಪ್ರಮುಖ ಸತ್ಯಮೂರ್ತಿ ತಿಳಿಸಿದ್ದಾರೆ.

`ಶಾಲಾ ಬಂದ್ ಬಗ್ಗೆ ಸಂಘಟನೆಯಿಂದ ಯಾವುದೇ ಸುತ್ತೋಲೆ ಬಂದಿಲ್ಲ. ಹಾಗಾಗಿ ಬಂದ್ನಲ್ಲಿ ಪಾಲ್ಗೊಂಡಿಲ್ಲ. ಅಲ್ಲದೆ ಒಂದು ವಾರಗಳ ಕಾಲ ಬಂದ್ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡವುದು ಸರಿಯಲ್ಲ~ ಎಂದು ವಿ.ವಿ.ಪುರದ ವಾಸವಿ ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ `ಪ್ರಜಾವಾಣಿ~ಗೆ ತಿಳಿಸಿದರು.

`ಬಂದ್ ನಡೆಸುವ ಬಗ್ಗೆ ಗೊಂದಲ ಇತ್ತು. ಹಾಗಾಗಿ ಮುಂಚಿತವಾಗಿ ರಜೆ ಘೋಷಿಸಿರಲಿಲ್ಲ. ಸೋಮವಾರ ಬೆಳಿಗ್ಗೆ ಬೇಗನೆ ಪೋಷಕರು ಮಕ್ಕಳನ್ನು ಕರೆ ತಂದಿದ್ದರು. ಅವರನ್ನು ವಾಪಸ್ ಕಳುಹಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ತರಗತಿಗಳನ್ನು ನಡೆಸಲಾಯಿತು~ ಎಂದು ರಾಜಾಜಿನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕುಮಾರಸ್ವಾಮಿ ಮಾಹಿತಿ ನೀಡಿದರು.

`ಶಾಲೆಯಲ್ಲಿ ಈಗ ಪರೀಕ್ಷೆಗಳು ನಡೆಯುತ್ತಿವೆ. ಅಲ್ಲದೆ ಮಕ್ಕಳು ಶಾಲೆಗೆ ಬಂದಿದ್ದರು. ನಾವು ಶಾಲಾ ಬಂದ್ ಮಾಡಿಲ್ಲ. ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ~ ಎಂದು ಬಸವನಗುಡಿಯ ನ್ಯೂ ಜನರೇಷನ್ ಶಾಲೆಯ ಪ್ರಮುಖರು ತಿಳಿಸಿದ್ದಾರೆ.

ಬಂದ್ಗೆ ಖಂಡನೆ
ಬೆಂಗಳೂರು: ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ನಡೆಸುತ್ತಿರುವ ಬಂದ್ ಅನ್ನು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಂಯೋಜಿತ ವೇದಿಕೆಯು (ಎಸ್ಡಿಎಂಸಿಸಿಎಫ್) ತೀವ್ರವಾಗಿ ಖಂಡಿಸಿದೆ.

ಕುಸ್ಮಾ ಕರೆ ನೀಡಿರುವ ಬಂದ್ ಸಂವಿಧಾನದ 21ಎ ಕಲಂನ ಆಶಯವನ್ನೇ ಮುರಿಯುವಂತಿದೆ. ಮಕ್ಕಳ ಉಚಿತ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿ ಕುಸ್ಮಾ ತೊಡಗಿದೆ ಎಂದು ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಆದೇಶವನ್ನೇ ಧಿಕ್ಕರಿಸಿರುವ ಕುಸ್ಮಾ ಕರೆ ನೀಡಿರುವ ಬಂದ್ ಕಾನೂನು ಬಾಹಿರವಾಗಿದೆ. ಇದರಿಂದ ವಿನಾಕಾರಣ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುತ್ತಿದೆ. ಬಂದ್ ಕೈಬಿಟ್ಟು ಮಾತುಕತೆ ಮೂಲಕ ಗೊಂದಲ ನಿವಾರಿಸಿಕೊಳ್ಳಬೇಕು ಎಂದು ವೇದಿಕೆಯ ಡಾ.ವಿ.ಪಿ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.