ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣಗಳ ಸಂಸ್ಥೆ ಒಕ್ಕೂಟ, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ - ಬ್ಲ್ಯಾಕ್ಮೇಲ್ ಕೈಗೊಂಡಿದೆ. ಅದು ಕೊಟ್ಟಿರುವ ನೆಪವೇನೋ, ಸಮಂಜಸವೇ. ಆದರೆ ಸಮಗ್ರ ದೃಷ್ಟಿಯಿಂದ ಇದು `ಶಿಕ್ಷಣ ಷಾರ್ಕ್~ಗಳ ಕೊಬ್ಬು .

ಖಾಸಗಿ, ಪ್ರಿ-ನರ್ಸರಿ, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಂಸ್ಥೆಗಳು, ಅದರಲ್ಲೂ ಸರ್ಕಾರದ ಅನುದಾನವನ್ನು ತುಚ್ಛೀಕರಿಸುವವು, ಮಾಲ್ಗಳಲ್ಲಿನ ಕುರಕು ತಿಂಡಿ ಮಳಿಗೆಗಳಂತೆ ಇಂಗ್ಲಿಷ್ ಮೀಡಿಯಂ ಮತ್ತು ಕೇಂದ್ರದ ಸಿಬಿಎಸ್ಇ, ಐಸಿಎಸ್ಇ ಸಿಲಬಸ್ ಮಾರಾಟ ಮಾಡುತ್ತವೆ; ಶ್ರಿಮಂತ ತಾಯ್ತಂದೆಯರು, ದುಪ್ಪಟ್ಟು, ತಿಪ್ಪಟ್ಟು ಶುಲ್ಕ ತೆತ್ತು, ಹೆಮ್ಮೆ ಪಡುತ್ತಾರೆ.

ಶಾಲಾ ಶಿಕ್ಷಣ ಕಡ್ಡಾಯದಂತೆಯೇ ಉಚಿತ ಸಹ. ಇದು ರಾಜ್ಯ ಸರ್ಕಾರಗಳ ವಿಧಿ. ಪ್ರಾಥಮಿಕ ಶಿಕ್ಷಣವೆನ್ನುವುದು ಪ್ರಾದೇಶಿಕ ಪರಿಸರಕ್ಕೆ ಮಕ್ಕಳನ್ನು ಸಂಸ್ಕೃತೀಕರಿಸುವ ಹಂತ. ಅದು ಸಂಪೂರ್ಣವಾಗಿ, ರಾಜ್ಯ ಸರ್ಕಾರಗಳ ಕೈವಶದಲ್ಲಿಬೇಕು.

ಕೇಂದ್ರ ಬೇಕಾದರೆ, ವಿವಿಧ ರಾಜ್ಯ ಸಿಲಬಸ್ಗಳ ನಡುವೆ ಪ್ಯಾರಿಟಿ ಸೂತ್ರ ಕಡ್ಡಾಯ ಮಾಡಬಹುದು. ಕೇಂದ್ರದ ದಬ್ಬಾಳಿಕೆಯಿಂದ ಈಗ ಕಡ್ಡಾಯ ಪ್ರಾಥಮಿಕ ಶಿಕ್ಷಣವೂ, ಭಾಷಾವಾರು ಪ್ರಾಂತ ವಿಂಗಡಣೆ ಘನೋದ್ದೇಶವೂ ವ್ಯರ್ಥವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.