ಗುರುವಾರ , ಮೇ 26, 2022
30 °C

ಕೂಡುಂಕುಳಂ: ರಷ್ಯ ವಿಜ್ಞಾನಿಗಳು ಹಿಂದಿರುಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ, (ಪಿಟಿಐ): ಭಾರತ ಮತ್ತು ರಷ್ಯಾ ಜಂಟಿಯಾಗಿ ಕೈಗೊಂಡಿರುವ ಕೂಡುಂಕುಳಂ ಪರಮಾಣು ವಿದ್ಯುತ್ ಘಟಕದಲ್ಲಿ 150  ರಷ್ಯಾ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆಯಿಂದ ಅವರಲ್ಲಿ ಯಾರೂ ಕೆಲಸ ತೊರೆದಿಲ್ಲ ಎಂದು ಯೋಜನೆಯ ಉನ್ನತ ಅಧಿಕಾರಿಗಳು ಸ್ಪಷ್ಟನೆ ನಿಡಿದ್ದಾರೆ.

`ಯಾವೊಬ್ಬ ರಷ್ಯಾ ವಿಜ್ಞಾನಿಗಳು ಮರಳಿ ಹೋಗಿಲ್ಲ. ಅವರು ನಮ್ಮಂದಿಗೆ ಕೆಲಸ ಮಾಡುತ್ತಿದ್ದಾರೆ. ಘಟಕದಲ್ಲಿ 150 ರಷ್ಯಾ ವಿಜ್ಞಾನಿಗಳಿದ್ದು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡುಂಕುಳಂ ಅಣುಶಕ್ತಿ ಘಟಕ (ಕೆಎನ್‌ಪಿಪಿ) ದ ಯೋಜನಾ ನಿರ್ದೇಶಕ ಎಂ. ಕಾಶಿನಾಥ ಬಾಲಾಜಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

`ಇಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ವಿಜ್ಞಾನಿಗಳಲ್ಲಿ ಕೆಲವರು ಒಬ್ಬರೇ ವಾಸಿಸುತ್ತಿದ್ದರೆ, ಕೆಲವರು ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇತರರು ದೀರ್ಘ ಮತ್ತು ಅಲ್ಪಾವಧಿ ಕಾರ್ಯಭಾರದ ಮೇಲೆ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.

ಯೋಜನೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ರಷ್ಯಾ ವಿಜ್ಞಾನಿಗಳು ಯೋಜನೆ ಬಿಟ್ಟು ಮರಳಿದ್ದಾರೆ ಎಂಬ ಮಾಧ್ಯಮ ವರದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ಯೋಜನೆಯ ಮೊದಲ ಘಟಕದ ಶೇ 99 ಕೆಲಸ ಮುಗಿದಿದ್ದು ಈ ವರ್ಷದ ಡಿಸೆಂಬರ್‌ನಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಎರಡನೇ ಘಟಕದ ಶೇ 93 ಕಾರ್ಯ ಪೂರ್ಣಗೊಂಡಿದ್ದು ಮುಂದಿನ ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.