ಭಾನುವಾರ, ಜೂನ್ 13, 2021
21 °C

ಕೃತಕ ಉಸಿರಾಟ ಸಾಧನದಿಂದ ಅಂಬರೀಷ್‌ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ವಾಸಕೋಶದ ಸೋಂಕಿ­ನಿಂದಾಗಿ ಅನಾರೋಗ್ಯಕ್ಕೆ ಒಳಗಾದ ನಟ, ಸಚಿವ ಅಂಬರೀಷ್‌ ಅವರ ಆರೋಗ್ಯ ಸ್ಥಿತಿಯಲ್ಲಿ ಮತ್ತಷ್ಟು ಚೇತರಿಕೆ ಕಂಡುಬಂದಿದ್ದು, ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟ ಸಾಧನವನ್ನು ತೆಗೆಯಲಾಗಿದೆ.ಎರಡು ವಾರಗಳ ಹಿಂದೆ ಕೃತಕ ಉಸಿರಾಟ ಸಾಧನವನ್ನು ಅಳವಡಿ­ಸ­ಲಾ­­ಗಿತ್ತು. ಅಂಬರೀಷ್‌ ಸಹಜ ಉಸಿ­ರಾಟ ಸ್ಥಿತಿಗೆ ಮರಳಿದ್ದು, ಚಿಕಿತ್ಸೆ ನೀಡು­ತ್ತಿ­ರುವ ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯ ವೈದ್ಯರು ಸಾಧನವನ್ನು ತೆಗೆದಿದ್ದಾರೆ.ಈ ಬಗ್ಗೆ ಗುರುವಾರ ನಡೆದ ಪತ್ರಿಕಾಗೋಷ್ಠಿ­ಯಲ್ಲಿ ಮಾಹಿತಿ ನೀಡಿದ ವಿಕ್ರಂ ಆಸ್ಪ­ತ್ರೆಯ ಶ್ವಾಸ­ಕೋಶ ತಜ್ಞ ಡಾ.ಕೆ.­ಎಸ್‌.­ಸತೀಶ್‌, ‘ಅಂಬರೀಷ್‌ ಅವರ ಆರೋ­ಗ್ಯದ ಬಗ್ಗೆ ಸತತವಾಗಿ ಸಿಂಗ­ಪುರದ ವೈದ್ಯ­ರಿಂದ ಮಾಹಿತಿ ಪಡೆ­ಯು­ತ್ತಿದ್ದೇವೆ. ಅವರ ಎಲ್ಲ ಅಂಗಾಂಗ­ಗಳು ಸಹಜ ರೀತಿಯಲ್ಲಿ ಕಾರ್ಯ­ನಿರ್ವಹಿಸುತ್ತಿವೆ. ಶ್ವಾಸಕೋಶದ ಸೋಂಕು ಕಡಿಮೆ­ಯಾ­ಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.