ಮಂಗಳವಾರ, ಜೂನ್ 22, 2021
23 °C

ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕಿತ ಪುಸ್ತಕ: ಕವಿ ಜಯಂತ ಕಾಯ್ಕಿಣಿ ಅವರ ಕಥಾ ಸಂಕಲನ `ಚಾರ್‌ಮಿನಾರ್~ ಹಾಗೂ ಸಿನೆಮಾ ಹಾಡುಗಳ `ಎಲ್ಲೋ ಮಳೆಯಾಗಿದೆ~ ಕೃತಿಗಳು ಲೋಕಾರ್ಪಣೆಯಾಗಲಿವೆ. ಸಾಹಿತಿ ಅ.ರಾ. ಮಿತ್ರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.ಈ ನಿಮಿತ್ತ ವಿಶೇಷ `ಸಿನೆ ಕವಿ ಸಮ್ಮಿಲನ~ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಿ.ವಿ.ಶಿವಶಂಕರ್, ದೊಡ್ಡರಂಗೇಗೌಡ, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ಎಚ್.ಎಸ್.ವೆಂಕಟೇಶ ಮೂರ್ತಿ, ವಿ.ಮನೋಹರ್, ಎಂ.ಎನ್.ವ್ಯಾಸರಾವ್, ಕೆ.ಕಲ್ಯಾಣ್, ಎಸ್.ನಾರಾಯಣ್, ಬಿ.ಎಲ್.ಲಕ್ಷ್ಮಣ ರಾವ್, ಭಂಗಿ ರಂಗ, ಗೋಪಾಲ ವಾಜಪೇಯಿ, ನಾಗೇಂದ್ರ ಪ್ರಸಾದ್, ಕವಿರಾಜ್, ಗುರುಪ್ರಸಾದ್, ರಾಮ್ ನಾರಾಯಣ್, ಬೇಲೂರು ರಾಮಮೂರ್ತಿ, ಯೋಗರಾಜ ಭಟ್, ಪ್ರೇಮ್, ಗೌಸ್ ಪೀರ್, ಶ್ರೀಧರ್ ವಿ. ಸಂಭ್ರಮ್, ಶಶಾಂಕ್, ಜಯಂತ ಕಾಯ್ಕಿಣಿ ಪಾಲ್ಗೊಳ್ಳಲಿದ್ದಾರೆ. ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಭಾನುವಾರ ಬೆಳಿಗ್ಗೆ 10.30.ನವಕರ್ನಾಟಕ ಪ್ರಕಾಶನ: ಡಾ.ಸಿ.ಆರ್.ಚಂದ್ರಶೇಖರ್ ಅವರ `ವೃದ್ಧರ ಮನಸ್ಸು ಹೀಗೇಕೆ?~, `ನಿದ್ರೆ-ಕನಸು. 50 ಪ್ರಶ್ನೆಗಳು~, ಡಾ.ವಿ.ಪರಮೇಶ್ವರ ಅವರ `ಬೊಜ್ಜುದೇಹ~, ಶ್ವೇತಾ ನರಗುಂದ ಅವರ `ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ~, ಡಾ.ಗಣೇಶ್‌ರಾವ್ ನಾಡಿಗೇರ್ ಅವರ `ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ ಹೇಗೆ?~, ಡಾ.ಎಂ.ಎಸ್.ಎಸ್.ಮೂರ್ತಿ ಅವರ `ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ?~ ಕೃತಿಗಳು ಲೋಕಾರ್ಪಣೆಯಾಗಲಿವೆ. ಡಾ.ಪದ್ಮಿನಿ ಪ್ರಸಾದ್ ಕೃತಿಗಳನ್ನು ಅನಾವರಣಗೊಳಿಸಲಿದ್ದಾರೆ.

 

ಡಾ.ನಾ.ಸೋಮೇಶ್ವರ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ. ಭಾನುವಾರ ಬೆಳಿಗ್ಗೆ 9.30ಕ್ಕೆ.ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ: ಬಿ. ಪಾರ್ಥಸಾರಥಿ ಅವರ `ಕಾರ‌್ಯಭಾರದ ನೆನಪುಗಳು~ ಪುಸ್ತಕ ಲೋಕಾರ್ಪಣೆ, ಐ.ಎ.ಎಸ್. ಅಧಿಕಾರಿ ಎಸ್.ವಿ. ರಂಗನಾಥ್‌ನ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ಕವಿ ಎಸ್.ಜಿ.ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ಎಸ್.ಜಿ.ಶಂಕರಲಿಂಗೇ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್,  ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಭಾನುವಾರ ಬೆಳಿಗ್ಗೆ 11ಕ್ಕೆ.ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನ: ಬಿ.ಪಿ.ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್. ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಗೋಪಾಲಕೃಷ್ಣರಾಯ (ಗೋಕೃ) ವಿರಚಿತ ಮೂರು ಸಮಗ್ರ ಕೃತಿಗಳ ಲೋಕಾರ್ಪಣೆ ಸಮಾರಂಭ. ಉದ್ಘಾಟನೆ: ಖ್ಯಾತ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ. ಪುಸ್ತಕ ಬಿಡುಗಡೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್.ಗೋ.ಕೃ.ವೆಬ್‌ತಾಣ ಚಾಲನೆ: ದೂರದರ್ಶನ ಕೇಂದ್ರ ಉಪ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ. ಅತಿಥಿಗಳು: ಜೆ.ಆರ್.ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಗೀತಾ ರಾಮಾನುಜಂ. ಶನಿವಾರ ಬೆಳಿಗ್ಗೆ 10.ಸಪ್ನ ಬುಕ್ ಹೌಸ್: ಗಾಂಧೀ ಭವನ, ಕುಮಾರ ಕೃಪ ರಸ್ತೆ. ನಂದನ್ ನಿಲೇಕಣಿ ಅವರ `ಇಮಾಜಿನಿಂಗ್ ಇಂಡಿಯಾ~ದ ಕನ್ನಡ ಅನುವಾದ ಪುಸ್ತಕ ಕೆ.ಈ.ರಾಧಾಕೃಷ್ಣ ಅವರ `ಬಿಂಬ ಭಾರತ~-ಹೊಸ ಶತಮಾನದ ಕಲ್ಪನೆ ಪುಸ್ತಕ ಬಿಡುಗಡೆ ಸಮಾರಂಭ. ಪುಸ್ತಕ ಬಿಡುಗಡೆ- ಕೇಂದ್ರ ಕಾರ್ಪೊರೇಟ್ ವ್ಯವಹಾರ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ. ಅಧ್ಯಕ್ಷತೆ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ, ಅತಿಥಿಗಳು: ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ನಂದನ್ ನಿಲೇಕಣಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ. ಶನಿವಾರ ಬೆಳಿಗ್ಗೆ 10.30.ಚಿಂತನ ಪುಸ್ತಕ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ. `ಅಂತರರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆ~ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ. ಅಧ್ಯಕ್ಷತೆ: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ. ಶನಿವಾರ ಮಧ್ಯಾಹ್ನ 3.30.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರ, ಕಿ.ರಂ.ನುಡಿ ಮನೆ, ನಂ.36, ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಡಾ.ಸುಮತೀಂದ್ರ ನಾಡಿಗ್-ಮಾಲತಿ ನಾಡಿಗ್‌ರ ಬದುಕು ಬರಹ, ಕೃತಿ ವಾಚನ, ಸಲ್ಲಾಪ ಸಂವಾದ ಮತ್ತು ಮಾಲತಿ ನಾಡಿಗ್ ಅವರ `ಸಮಾನತೆ~ ಕಥಾ ಸಂಕಲನ ಬಿಡುಗಡೆ. ಪುಸ್ತಕ ಬಿಡುಗಡೆ: ಖ್ಯಾತ ಕತೆಗಾರ ಕೆ.ಸತ್ಯನಾರಾಯಣ. ಶನಿವಾರ ಸಂಜೆ 5.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.