ಕೃಷಿ ಉಪಕರಣ ತಯಾರಿಕೆ ತರಬೇತಿ

7

ಕೃಷಿ ಉಪಕರಣ ತಯಾರಿಕೆ ತರಬೇತಿ

Published:
Updated:

ಯಲ್ಲಾಪುರ:ತಾಲ್ಲೂಕಿನ  ಇಡಗುಂದಿ ಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ  ಶನಿವಾರ ರಾಷ್ಟ್ರೀಯ ರೈತ ವಿಜ್ಞಾನಿ ಪ್ರಶಸ್ತಿ ವಿಜೇತ ರವೀಂದ್ರ ಭಟ್ಟ ಕಣ್ಣಿ ಅವರು ಪ್ರಗತಿಪರ ರೈತರಿಗೆ ಸರಳ ವಿಧಾನದಲ್ಲಿ ಕೃಷಿ ಉಪಕರಣಗಳ ತಯಾರಿಕೆ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.   ಸುಮಾರು ಮೂವತ್ತು ತರಬೇತು ದಾರರು ಉಪಸ್ಥಿತರಿದ್ದ  ತರಬೇತಿ ಕಾರ್ಯಕ್ರಮದಲ್ಲಿ  ಸ್ಥಳೀಯ ಕಚ್ಚಾ ವಸ್ತು ಉಪಯೋಗಿಸಿ ಸರಳ ವಿದಾನದಲ್ಲಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾದ,  ಸೋಲಾರ್ ನೀರು ಕಾಯಿಸುವ ಯಂತ , ಮಲ್ಟಿಪರ್ಪಸ್ ಸ್ಪ್ರೇಯರ್, ವಿವಿದ ಕೀಟ ನಾಶಕ ರಾಸಾಯನಿಕಗಳು, ಪಿ.ವಿ.ಸಿ. ಪೈಪ್‌ಮೂಲಕ ನೀರು ಕಾಯಿಸುವ ತಂತ್ರಜ್ಞಾನ, ರಂಗೋಲಿ ಬಿಡಿಸುವ ಯಂತ್ರ,  ಮುಂತಾದ ಕೃಷಿ ಉಪಕರಣಗಳನ್ನು ಪರಿಚಯಿಸಿ ಅದನ್ನು ತಯಾರಿಸುವ ವಿಧಾನವನ್ನು ವಿವರಿಸಿದರು. ಪ್ರಮುಖರಾದ ತಿರುಮಲೇಶ್ವರ ಕೆರೆಗದ್ದೆ, ಮಹಾಬಲೇಶ್ವರ ಸಣ್ಣೆಮನೆ, ನಾರಾಯಣ ಏಕಾನ, ವಿ.ಎನ್.ಭಟ್ಟ ಆರ್ತಿಬೈಲ್, ಮಾಧವಿ ಭಟ್ಟ , ಕಮಲಾ ತಿಮ್ಮಣ್ಣ ಭಟ್ಟ, ಮಂಜುನಾಥ ಕೆರೆಗದ್ದೆ, ಮುಂತಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ರೈತ ವಿಜ್ಞಾನಿ ಪ್ರಶಸ್ತಿಯನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದ ಇವರನ್ನು ಊರ ನಾಗರೀಕರ ಪರವಾಗಿ ಕೃಷ್ಣ ವೆಂಕಪ್ಪ ಕೆರೆಗದ್ದೆ ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry