ಗುರುವಾರ , ಮೇ 19, 2022
22 °C

ಕೃಷಿ ಕೋರ್ಸ್: ವಿವಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯವು  ಬಿಎಸ್ಸಿ (ಕೃಷಿ) ಮತ್ತು ಬಿ.ಟೆಕ್ (ಕೃಷಿ ತಾಂತ್ರಿಕತೆ)  ಸ್ನಾತಕ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೆರಿಟ್ ಲಿಸ್ಟ್ ಮಾಡುವಾಗ ಶೇ 50ರಷ್ಟು ಪಿ.ಯು.ಸಿ ಅಂಕಗಳು ಹಾಗೂ ಶೇ 50ರಷ್ಟು ಸಿ.ಇ.ಟಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಸಚಿವ ಡಾ.ಪಿ ಬಾಲಕೃಷ್ಣನ್ ತಿಳಿಸಿದ್ದಾರೆ.



ಈ ಮೆರಿಟ್ ಲಿಸ್ಟ್ ಅನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಕೌನ್ಸೆಲಿಂಗ್ ದಿನಾಂಕಗಳ ಮುಂಚಿತವಾಗಿ ತೋರಿಸಲಾಗುತ್ತದೆ ಎಂದರು.



ಕೃಷಿಕರ ಕೋಟಾದಡಿ ಜುಲೈ 12 ರಮದು ನಡೆಸಲು ನಿಗದಿಪಡಿಸಿದ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಅದನ್ನು ಜುಲೈ 19 ರಂದು ಮುಂಜಾನೆ 9 ಗಂಟೆಗೆ ರಾಯಚೂರು ಕೃಷಿ ವಿವಿ ಆವರಣದಲ್ಲಿರುವ ಕೃಷಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.