ಮಂಗಳವಾರ, ಮೇ 24, 2022
24 °C

ಕೃಷಿ ನಿರಾಸಕ್ತಿ ಒಳ್ಳೆಯದಲ್ಲ: ಯೋಗೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಇದು ನಿಜಕ್ಕೂ ಅನಾರೋಗ್ಯಕರ ಬೆಳವಣಿಗೆಯಾಗಿದೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ನಗರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಗೃಹ ಮತ್ತು ಕೃಷಿ ಉಪಯೋಗಿ ವಾಹನಗಳ ಮತ್ತು ಪುಸ್ತಕಗಳ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.ರೈತರು ಇಂದಿಗೂ ಸಾಂಪ್ರದಾಯಿಕ ಪದ್ಧತಿಯಲ್ಲೇ ಕೃಷಿ ಚಟುವಟಿಕೆ ಮಾಡುತ್ತಿದ್ದು ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರಲ್ಲಿ ದಿನೇ ದಿನೇ ಕೃಷಿಯ ಬಗ್ಗೆ ನಿರಾಸಕ್ತಿ ಬೆಳೆಯುತ್ತಿದೆ. ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕೃಷಿಯೂ ಸಹ ಲಾಭದಾಯಕ ಕ್ಷೇತ್ರವಾಗುತ್ತದೆ ಎಂದರು.ರೈತರ ಬೆಳೆಗಳಿಗೆ ಇಂದಿಗೂ ಸರಿಯಾದ ಬೆಲೆ ಸಿಗದಿರುವುದು ವಿಷಾದನೀಯ. ಇದಕ್ಕೆ ಸರಿಯಾದ ಮಾರ್ಗ ಕಂಡುಕೊಳ್ಳಬೇಕು ಎಂದ ಯೋಗೇಶ್ವರ್, ಕೃಷಿಗಾಗಿ ನವನವೀನ ಉಪಕರಣಗಳು, ಯಂತ್ರಗಳು, ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ದೊರೆಯುತ್ತಿದ್ದು, ರೈತರು ಇವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದರು.ಸಚಿವರು ವಸ್ತು ಪ್ರದರ್ಶನ ಹಾಗೂ ನವಜ್ಯೋತಿ ಪ್ರಕಾಶನದ ಪುಸ್ತಕ ಮಾರಾಟ ಮಳಿಗೆಗೆ ಭೇಟಿ ನೀಡಿ ವೀಕ್ಷಿಸಿದರು. ಹಾಪ್‌ಕಾಮ್ಸ ನಿರ್ದೇಶಕ ಎಸ್. ಸಿ. ಶೇಖರ್, ಮುಖಂಡರಾದ ಹರೂರು ರಾಜಣ್ಣ, ಪ್ರೇಮ್‌ಕುಮಾರ್, ನಗರಸಭಾ ಸದಸ್ಯ ಪುರುಷೋತ್ತಮ್, ತಾ.ಪಂ. ಸದಸ್ಯ ರಮೇಶ್, ಸಂಸ್ಥೆಯ ವ್ಯವಸ್ಥಾಪಕ ಎ.ಎಂ.ಸುರೇಶ್ ಇತರರು ಇದ್ದರು.ಬೆಂಗಳೂರಿನ ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕರು, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.