ರಾಮನಗರ: ವ್ಯವಸಾಯ ಮಾಡಿ ಜೀವನ ಸಾಗಿಸುವ ಜನ ದಿನೇ ದಿನೇ ಕಡಿಮೆಯಾಗುತ್ತಿದ್ದಾರೆ. ಇದರಿಂದಾಗಿ ಭವಿಷ್ಯದಲ್ಲಿ ಹಣವಿದ್ದರೂ ಊಟಕ್ಕಾಗಿ ಪರದಾಡಬೇಕಾದ ಪರಿಸ್ತಿತಿ ನಿರ್ಮಾಣವಾಗಬಹುದು ಎಂದು ರಾಮನಗರ ತಹಶೀಲ್ದಾರ್ ಡಿ.ಬಿ.ನಟೇಶ್ ಕಳವಳ ವ್ಯಕ್ತಪಡಿಸಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವತಿಯಿಂದ ಅವ್ವೇರಹಳ್ಳಿ ಗ್ರಾಮದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ವಿಶೇಷ ಸೇವಾ ಶಿಬಿರದಲ್ಲಿ ಅವರು ಮಾತನಾಡಿದರು.

ಗುದ್ದಲಿ, ಪಿಕಾಸಿ ಸೇರಿದಂತೆ ಮೊದಲಾದ ಕೃಷಿ ಸಲಕರಣೆಗಳನ್ನೇ ನೋಡದ ಜನರು ಇಂದ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಶಿಕ್ಷಣ ಹಾಗೂ ಉದ್ಯೋಗದ ಹೆಸರಿನಲ್ಲಿ ಗ್ರಾಮೀಣ ಪ್ರದೇಶದಿಂದ ಜನತೆ ನಗರಗಳತ್ತ ವಲಸೆ ಹೋಗುತ್ತಿರುವುದರಿಂದ ದೇಶದ ಕೃಷಿ ಚಟುವಟಿಕೆ ಕುಂಟಿತವಾಗುತ್ತಿದೆ ಎಂದು ಅವರು ಹೇಳಿದರು.

ಸ್ಪರ್ಧಾ ಯುಗವಾಗಿರುವುದರಿಂದ ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಭವಿಷ್ಯವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು. ತಮ್ಮ ಜವಾಬ್ದಾರಿ ಅರಿತು ವ್ಯಾಸಂಗ ಮಾಡಿದರೆ ನಿಮ್ಮ ಭವಿಷ್ಯ ಉಜ್ವಲವಾಗುವುದರ ಜತೆಗೆ ಸಮಾಜ ಮತ್ತು ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಎನ್ಎಸ್ಎಸ್ ಸೇವಾ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯಬೇಕು. ಈ ಮನೋಭಾವಗಳಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.ಪ್ರಾಚಾರ್ಯ ಪ್ರೊ. ಎಂ.ಎಸ್.ಮಹದೇವಮೂರ್ತಿ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಲಿಂಗೇಗೌಡ, ಗುತ್ತಿಗೆದಾರ ಕೆ.ತಮ್ಮಣ್ಣ, ಯುವ ಮುಖಂಡ ಶಿವಲಿಂಗಯ್ಯ, ಪ್ರಾಧ್ಯಾಪಕರಾದ ಡಿ. ರಂಗಸ್ವಾಮಿಗೌಡ, ಡಾ. ಮೋಹನ್ದಾಸ್, ಎಲ್.ಸಿ.ರಾಜು, ಶಿಬಿರಾಧಿಕಾರಿಗಳಾದ ಕೆ.ಡಿ.ಆನಂದ್, ಎನ್.ಮಮತ ಮೊದಲಾದವರು ಉಪಸ್ಥಿತರಿದ್ದರು.ಶಿಬಿರಾರ್ಥಿ ಶಿವರಾಜು ಸ್ವಾಗತಿಸಿದರು. ಸಿ. ಮೋಹನ್ ಕುಮಾರ್ ಶಿಬಿರದ ಕಾರ್ಯ ಚಟುವಟಿಕೆಗಳ ವರದಿ ಓದಿದರು. ಎಸ್. ರಮ್ಯಾ ವಂದಿಸಿದರು. ಸುಂದರೇಶ್ ಕಾರ್ಯಕ್ರಮ ನಿರೂಪಿಸಿದರು.ಏಳು ದಿನಗಳ ಈ ಶಿಬಿರದಲ್ಲಿ ರಸ್ತೆ ಮತ್ತು ಚರಂಡಿ ಸ್ವಚ್ಛತೆ, ಬೆಟ್ಟದ ಮೇಲಕ್ಕೆ ಮರಳು ಮತ್ತು ಜಲ್ಲಿ ಸಾಗಾಣಿಕೆ ಮೊದಲಾದ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.