ಚಿಕ್ಕೋಡಿ: ಕೃಷಿ ಕ್ಷೇತ್ರದ ಪ್ರಗತಿ ಯೊಂದಿಗೆ ಕೃಷಿಕನ ಆರೋಗ್ಯ ಸುಧಾರ ಣೆಗೆ ಒತ್ತು ನೀಡಿರುವ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು ಈಚೆಗೆ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ವ್ಯವಸ್ಥೆಯಡಿ 6500 ಜನರು ಆರೋಗ್ಯ ಸೇವೆ ಪಡೆದರು.

ಮೇಳದ ಮೂರು ದಿನಗಳ ಕಾಲ ಸುಮಾರು 100 ಜನ ವೈದ್ಯರ ಹಾಗೂ ವೈದ್ಯಕೀಯೇತರ ತಂಡ ರೈತರು, ರೈತ ಮಹಿಳೆಯರು,ಅಬಾಲ–ವೃದ್ಧರ ಆರೋಗ್ಯ ತಪಾಸಣೆ, ರಕ್ತ–ಮೂತ್ರ ತಪಾಸಣೆ, ಇಸಿಜಿ ತಪಾಸಣೆಯನ್ನು ಮಾಡಿತು. ಹೃದಯ ವಿಭಾಗ, ಮೂತ್ರ ಕೋಶ, ವೈದ್ಯಕೀಯ, ಎಲುಬು–ಕೀಲು, ಚಿಕ್ಕ ಮಕ್ಕಳ ತಜ್ಞರು, ನೇತ್ರ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ , ಪ್ರಸೂತಿ, ಶಸ್ತ್ರಚಿಕಿತ್ಸೆ, ಚರ್ಮರೋಗ ವಿಭಾಗದ ತಜ್ಞ ವೈದ್ಯರು ಈ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಿದರು.

ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ 782 ರೋಗಿಗಳಿಗೆ ಡಾ.ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದು ಕೆಎಲ್ಇ ನಿರ್ದೇಶಕರೂ ಆದ ಡಿಕೆಎಸ್ಎಸ್ಕೆ ಅಧ್ಯಕ್ಷ ಅಮಿತ ಕೋರೆ ಹೇಳಿದರು.

ಮೂರು ದಿನಗಳ ಕಾಲ 6500ಕ್ಕೂ ಹೆಚ್ಚು ವಿವಿಧ ರೋಗಗಳ ಕುರಿತು ತಪಾಸಣೆ ಮಾಡಿಕೊಂಡಿದ್ದು, 1000 ಕ್ಕೂ ಅಧಿಕ ರೋಗಿಗಳ ರಕ್ತ ತಪಾಸಣೆ, 477 ಹೃದಯ ರೋಗಿಗಳ ಇಸಿಜಿ, 108 ಜನ ಇಕೋ ಪರೀಕ್ಷೆ ಮತ್ತು ₨6 ಲಕ್ಷ ಮೌಲ್ಯದ ಉಚಿತ ಔಷಧಿಯನ್ನೂ ವಿತರಿಸಲಾಗಿದೆ. ಮಧುಮೇಹ ನಿಯಂ ತ್ರಿಸುವ ಕ್ರಮಗಳು ಮತ್ತು ಮಧುಮೇಹಿ ಗಳಿಗೆ ಅವಶ್ಯವಿರುವ ಆಹಾರದಲ್ಲಿ ಪಥ್ಯ, ವ್ಯಾಯಾಮ ಹಾಗೂ ಔಷಧಿ ಕುರಿತು ಕೆಎಲ್ಇ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಉಪ ನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.