ಸೋಮವಾರ, ಜನವರಿ 27, 2020
26 °C

ಕೃಷ್ಣಮೃಗ, ಕಾಡೇ...ಬೆಳಕು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಸಂತ ಪ್ರಕಾಶನ, ಮಾಸ್ತಿ ಟ್ರಸ್ಟ್: ಶುಕ್ರವಾರ ಕನ್ನಡದ ಆಸ್ತಿ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಸ್ಮರಣೆಗೆಂದು ಏರ್ಪಡಿಸಿದ್ದ ಮಾಸ್ತಿ ಕಾದಂಬರಿ ಪುರಸ್ಕಾರ ಕೃತಿಗಳ ಲೋಕಾರ್ಪಣೆ ಹಾಗೂ ಮಾಸ್ತಿ ಕಥಾ ಪುರಸ್ಕಾರ ಪ್ರದಾನ.

ಸಚಿವ ಗೋವಿಂದ ಎಂ.ಕಾರಜೋಳ ಅವರಿಂದ ಶರತ್ ಕಲ್ಕೋಡ್ ಅವರ `ಕಾಡೇ ಗೂಡೇ~, ಉಷಾ ನರಸಿಂಹನ್ ಅವರ `ಕೃಷ್ಣ ಮೃಗ~ ಹಾಗೂ ಗಿರೀಶ್ ಜಕಾಪುರೆ ಅವರ `ಬೆಳಕು ಬಂತು~ ಕೃತಿಗಳ ಲೋಕಾರ್ಪಣೆ. ವಿಮರ್ಶಕ ಎಲ್. ಎಸ್.ಶೇಷಗಿರಿರಾವ್ ಅಧ್ಯಕ್ಷತೆ ವಹಿಸಲಿದ್ದು, ಎಂ.ಎಸ್.ಆಶಾದೇವಿ, ಮನು ಬಳಿಗಾರ್, ಬಿ.ಆರ್.ಲಕ್ಷ್ಮಣರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕೃಷ್ಣಮೃಗ: ಕಾದಂಬರಿಯೊಳಗೊಂದು ಕಾದಂಬರಿ ತಂತ್ರವನ್ನು ಇಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ. ಕೃಷ್ಣಮೃಗದ ಕರ್ತೃ ಪ್ರತಿಷ್ಠಿತವಾದ ಬುಕರ್ ಪ್ರಶಸ್ತಿಯನ್ನು ಗಳಿಸಿದನೆಂಬ ಪ್ರಸ್ತಾಪ ಹಾಗೂ ಅವನ ಸನ್ಮಾನದೊಂದಿಗೆ ಆರಂಭಗೊಳ್ಳುವ ಕಾದಂಬರಿ, ಲೇಖಕನ ಹಾಗೂ ಅವನ ಸಹಪಾಠಿ ಗೆಳತಿ ಕತೆಯೊಂದಿಗೆ ಬೆರೆತು ಬೆಳೆಯುತ್ತದೆ. ಜಾಣತನದಿಂದ ನಿರೂಪಿತವಾದ ಕಥಾ ಸಂವಿಧಾನದೊಂದಿಗೆ ಜನಸೇವೆಗೆಂದು ಬಂದ ಪರಕೀಯ ಜನರ ಕುಟಿಲ ಮನಸ್ಸು, ಅವರ `ರಸಾಗ್ರಹಣ~ದಲ್ಲಿ ಸಿಕ್ಕು ನಲುಗುವ ಅಮಾಯಕ ಜನರ ಬವಣೆ ಓದುಗರ ಮನಸ್ಸನ್ನು ತಲ್ಲಣಿಸುತ್ತದೆ.

ಕಾಡೇ ಗೂಡೇ...: ಮಲೆನಾಡಿನ ಅನಂತ ಮುಖಗಳನ್ನು ಸಮಸ್ತ ವಿವರಗಳೊಡನೆ ಚಿತ್ರಿಸಬೇಕೆಂದು ಹೊರಟ ಮಹತ್ವಾಕಾಂಕ್ಷೆಯ ಕೃತಿ ಇದು. ಮಲೆನಾಡಿನ ಜನರ ಚಿತ್ರಣ ಇಲ್ಲಿದೆ. ಪಾತ್ರಗಳ ನಿರೂಪಣೆ, ಸೊಗಸೆನ್ನಿಸುವ ಶೈಲಿ, ಸಂಧರ್ಭಗಳ ವಿಶ್ಲೇಷಣೆ, ನಮ್ಮ ಗ್ರಾಮ ಜೀವನದ ಸ್ಥಿತ್ಯಂತರದ ಅನಾವರಣ ಕಣ್ಣಿಗೆ ಕಟ್ಟಿಸುತ್ತದೆ.

ಬೆಳಕು ಬಂತು: ಅಭಿವೃದ್ಧಿ ಯೋಜನೆಗಳು ಪರಿಸರದ ಮೇಲೆ ಉಂಟು ಮಾಡುವ ಪರಿಣಾಮ. ಜನರ ಜೀವನ ವಿಧಾನವನ್ನು ಬದಲಿಸುವ ರೀತಿ, ಅವುಗಳ ಅನುಷ್ಠಾನದಲ್ಲಿ ನಡೆಯುವ ಭ್ರಷ್ಟಾಚಾರದ ವಿವಿಧ ಸ್ವರೂಪಗಳು, ನೈತಿಕತೆಯ ಅಧಃಪತನ ಅಂತಿಮವಾಗಿ ರೈತರು ಶೋಷಿತರಾಗಿಯೇ ಉಳಿಯುವ ದುರಂತ ಪರಿಣಾಮಗಳ ದಾರುಣ ಚಿತ್ರ ಇಲ್ಲಿದೆ.

ಸ್ಥಳ: ವುಡ್‌ಲ್ಯಾಂಡ್ಸ್ ಹೋಟೆಲ್, ಸಂಪಂಗಿ ರಾಮನಗರ. ಬೆಳಿಗ್ಗೆ 10.

ಪ್ರತಿಕ್ರಿಯಿಸಿ (+)