ರಾಯಚೂರು: ನಾರಾಯಣಪುರ ಜಲಾಶಯದಿಂದ ಕಳೆದ ಒಂದು ವಾರದಿಂದ ನಿರಂತರ ಹೆಚ್ಚಿನ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಮಂಗಳವಾರ ಸಂಜೆ 3 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹರಿ ಬಿಡಲಾಗಿದೆ.

ಇದರಿಂದ ದೇವದುರ್ಗ ತಾಲ್ಲೂಕಿನ ಹೂವಿನ ಹೆಡಗಿ ಸೇತುವೆ ಮುಳುಗಿದೆ. ಕೊಪ್ಪರ ನರಸಿಂಹ ದೇವಸ್ಥಾನದ ಕಟ್ಟೆಗೆ ಹೆಚ್ಚಿನ ನೀರು ತಟ್ಟುತ್ತಿದೆ. ದೇವಸ್ಥಾನ ಮುಳುಗಡೆ ಭೀತಿ ಎದುರಿಸುತ್ತಿದೆ.

ಇದೇ ಪ್ರಮಾಣದಲ್ಲಿ ರಾಯಚೂರು ತಾಲ್ಲೂಕಿನಲ್ಲೂ ಕೃಷ್ಣಾ ನದಿಯಲ್ಲಿ ನೀರು ಹರಿಯುತ್ತಿದೆ. ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಮುಳುಗಡೆ ಭೀತಿ ಎದುರಿಸುವ ಗ್ರಾಮಗಳಾದ ಬುರ್ದಿಪಾಡ, ಆತ್ಕೂರು, ಡೊಂಗಾರಾಂಪುರ, ಗಂಜಳ್ಳಿ ಸೇರಿದಂತೆ ಹಲವಾರು ಗ್ರಾಮಗಳ ಜನತೆ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಆಂಧ್ರಪ್ರದೇಶದ ಗದ್ವಾಲ್ ತಾಲ್ಲೂಕಿನಲ್ಲಿ ನಿರ್ಮಿಸಲಾದ ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಗಡೆ ಹರಿ ಬಿಡಲಾಗುತ್ತಿರುವುದರಿಂದ ಜಲಾಶಯದ ಮೇಲ್ಭಾಗದ ಈ ಗ್ರಾಮಗಳು ಸದ್ಯಕ್ಕೆ ನಿಟ್ಟುಸಿರು ಬಿಡುತ್ತಿದ್ದಾರೆ. ಜಲಾಶಯದಿಂದ ನೀರು ಹೊರಗಡೆ ಹರಿಸದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಗ್ರಾಮಗಳು ಮುಳುಗಡೆ ಆಗುತ್ತಿದ್ದವು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜುರಾಲಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುತ್ತಿದ್ದರೂ ಸಹ ಕೃಷ್ಣಾ ನದಿಯಲ್ಲಿ ಪ್ರವಾಹ ಕಡಿಮೆ ಆಗಿಲ್ಲ. ಮೇಲ್ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಹೊಂದಿಕೊಂಡಿರುವ ಗ್ರಾಮದ ಜಮೀನುಗಳಿಗೆ ನದಿ ನೀರು ನುಗ್ಗಿದೆ.

ನದಿ ದಂಡೆಯಲ್ಲಿ ಪಂಪ್ಸೆಟ್ ಇಟ್ಟು ಜಮೀನಿಗೆ ನೀರು ಪಡೆಯಲಾಗುತ್ತಿತ್ತು. ಪ್ರವಾಹ ಹೆಚ್ಚಾಗಿದ್ದರಿಂದ ಕೆಲ ಪಂಪ್ಸೆಟ್ಗಳು ಮುಳುಗಿವೆ. ಇದರಿಂದ ಎಚ್ಚೆತ್ತ ಇನ್ನುಳಿದ ರೈತರು ಪಂಪ್ಸೆಟ್ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವುದು ಬುಧವಾರ ನದಿ ದಂಡೆಯಲ್ಲಿ ಕಂಡು ಬಂದಿತು.

ತುಂಗಭದ್ರಾ ನದಿಯಲ್ಲೂ ನೀರು ಹೆಚ್ಚು ಹರಿಯುತ್ತಿದ್ದು, ರಾಜಲಬಂಡಾ ಸೇತುವೆ ಸುತ್ತಮುತ್ತ ಇರುವ ಕೆಲ ಗ್ರಾಮಗಳ ರೈತರ ಜಮೀನಿಗೆ ಎರಡು ದಿನದ ಹಿಂದೆ ನೀರು ನುಗ್ಗಿದೆ.

ಜೋಳದಹೆಡ್ಗಿ-ದೊಂಡಂಬಳಿ ರಸ್ತೆ ಸಂಪರ್ಕ ಕಡಿತ
ದೇವದುರ್ಗ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲ್ಲೂಕಿನ ಜೋಳದಹೆಡ್ಗಿ ಗ್ರಾಮದಿಂದ ದೊಂಡಂಬಳಿ ಗ್ರಾಮದ ಮುಖ್ಯ ಕೃಷ್ಣಾ ನದಿ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಜನರಿಗೆ ತೊಂದರೆ ಎದುರಾಗಿದೆ.
ಸೋಮವಾರ ಉಕ್ಕಿ ಹರಿದ ಕೃಷ್ಣಾ ನದಿಯಿಂದ ಸಂಪರ್ಕ ಕಡಿತಗೊಂಡ ನಂತರ ಮತ್ತೆ ಬುಧವಾರ ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿದೆ.

ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಜೋಳದಹೆಡ್ಗಿ ಗ್ರಾಮದ ಜನರು ದೇವದುರ್ಗ ಮುಖಾಂತರ ದೊಂಡಂಬಳಿ ಗ್ರಾಮಕ್ಕೆ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.