ಶುಕ್ರವಾರ, ಮೇ 7, 2021
25 °C

ಕೃಷ್ಣ ಪಾರಿಜಾತ ಯಕ್ಷಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾಕದಂಬ ಆರ್ಟ್ ಸೆಂಟರ್ ಆಶ್ರಯದಲ್ಲಿ ನಡೆಯಲಿರುವ ಸಂಸ್ಕೃತಿ ಸಿಂಚನ ಸರಣಿಯ ಮೊದಲನೇ ಕಾರ್ಯಕ್ರಮ ಗುಬ್ಬಲಾಳ ಶ್ರೀ ಶನೈಶ್ವರ ಸೇವಾ ಸಮಿತಿ ಸಭಾಂಗಣದಲ್ಲಿ ಇಂದು ಸಂಜೆ 5-30ಕ್ಕೆ ನಡೆಯಲಿದೆ.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಕಲಾಕದಂಬ ಸಂಸ್ಥೆ ನಡೆಸಿದ ಕಲಾವಿಕಸನ ಬೇಸಿಗೆಯ ಶಿಬಿರದಲ್ಲಿ ಯಕ್ಷಗಾನ ತರಬೇತಿ ಪಡೆದ ಮಕ್ಕಳು ಯಕ್ಷಗಾನ ಮರುಪ್ರದರ್ಶನ ನಡೆಸಲಿದ್ದಾರೆ.ರಾಧಾಕೃಷ್ಣ ಉರಾಳ ನಿರ್ದೇಶನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಯಕ್ಷಗಾನ ಪೂರ್ವರಂಗದ ಪೀಠಿಕಾ ಸ್ತ್ರೀವೇಷ, ಬಾಲಗೋಪಾಲ ನೃತ್ಯದ ಜೊತೆಗೆ ಕಂಸವಧೆ-ಕೃಷ್ಣ ಪಾರಿಜಾತ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.ಮಂಜುನಾಥ್ ಬಡಿಗೇರ್ ಹಾಗೂ ನಿತ್ಯಾನಂದ ನಾಯಕ್ ಪ್ರಸಂಗ ತಯಾರಿಯಲ್ಲಿ ಸಹಕರಿಸಿದ್ದಾರೆ. ನೇಪಥ್ಯದಲ್ಲಿ ಮುರಳೀಧರ ನಾವಡ ಸತ್ಯನಾರಾಯಣ್, ಅಂಬರೀಶ್ ಭಟ್, ವಿಶ್ವನಾಥ ಉರಾಳ, ದೇವರಾಜ ಕರಬ, ಮಮತಾ ಆರ್. ಕೆ, ಚಿದಾನಂದ ಕುಲಕರ್ಣಿ ಸಹಕರಿಸಲಿದ್ದಾರೆ. ಪ್ರದರ್ಶನ ಉಚಿತ. ಮಾಹಿತಿಗೆ:9448510582

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.