ಮಂಗಳವಾರ, ಏಪ್ರಿಲ್ 13, 2021
32 °C

ಕೆಎಂಎಫ್‌ಗೆ ಸರ್ಕಾರದಿಂದ ನೆರವಿನ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಎಂಎಫ್‌ಗೆ ಸರ್ಕಾರದಿಂದ ನೆರವಿನ ಘೋಷಣೆ

ಬೆಂಗಳೂರು (ಪಿಟಿಐ):  ಹಾಲಿನ ಪುಡಿಯ ಭಾರಿ ದಾಸ್ತಾನು ಮಾರಾಟವಾಗದೆ ಉಳಿದಿರುವ ಕಾರಣ ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ನೆರವಾಗಲು  ರಾಜ್ಯ ಸರ್ಕಾರ ಮುಂದಾಗಿದ್ದು, ಸಾಲದ ಬಡ್ಡಿಗೆ ಶೇ 4ರಷ್ಟು ಸಬ್ಸಿಡಿ ನೆರವು ನೀಡಲಾಗುವುದು ಎಂದು ಪ್ರಕಟಿಸಿದೆ.

ಸದ್ಯ `ಕೆಎಂಎಫ್' ಗೋದಾಮಿನಲ್ಲಿ ಕೆನೆರಹಿತ ಹಾಲಿನ ಪುಡಿ (ಎಸ್‌ಎಂಪಿ) ಮತ್ತು ಬೆಣ್ಣೆ ದಾಸ್ತಾನು ಭಾರಿ ಪ್ರಮಾಣದಲ್ಲಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ನಷ್ಟ ತುಂಬಿಕೊಳ್ಳಲು ಮತ್ತು ಹಾಲು ಉತ್ಪಾದಕರಿಗೆ ತಿಂಗಳ ಹಣ ಪಾವತಿಸಲೂ ಕೆಎಂಎಫ್‌ಗೆ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ `ಬಡ್ಡಿ ಸಬ್ಸಿಡಿ ನೆರವು' ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 1ರಿಂದ 2013ರ ಮಾರ್ಚ್ 31ರವರೆಗೆ ಉತ್ಪಾದನೆ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡುವುದರಿಮದ ಆಗುವ ನಷ್ಟದಲ್ಲಿ  ಶೇ 50ರಷ್ಟನ್ನು ಸರ್ಕಾರ ಭರಿಸಲಿದೆ ಎಂದೂ ಪ್ರಕಟಣೆ ತಿಳಿಸಿದೆ.

ಉತ್ಪಾದನೆ ಹೆಚ್ಚಳ-ಸಮಸ್ಯೆ: ಸದ್ಯ ಪ್ರತಿದಿನ `ಕೆಎಂಎಫ್'ಗೆ 54 ಲಕ್ಷ ಕೆ.ಜಿ. ಹಾಲು ಬರುತ್ತಿದ್ದು, 40 ಲಕ್ಷ ಕೆ.ಜಿ.ಯನ್ನು ಹಾಲಿನ ರೂಪದಲ್ಲಿಯೇ ಮಾರಲಾಗುತ್ತಿದೆ. ಉಳಿದ 14 ಲಕ್ಷ ಕೆ.ಜಿ. ಹಾಲನ್ನು ಕೆನೆರಹಿತ ಹಾಲಿನಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಇದು  ಕಷ್ಟಕ್ಕೆ ದೂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.