ಶನಿವಾರ, ಜನವರಿ 25, 2020
18 °C

ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿ ಬಡ್ಡಿ ದರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ):  ಕೆನರಾ ಬ್ಯಾಂಕ್‌ ಆಯ್ದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ 1ರಷ್ಟು ತಗ್ಗಿಸಿದೆ.

61ರಿಂದ 90 ದಿನಗಳ ಠೇವಣಿ ಬಡ್ಡಿ ದರ ಶೇ 8.75ರಿಂದ ಶೇ 7.75ಕ್ಕೆ ಇಳಿಕೆ ಯಾಗಿದೆ. 91ರಿಂದ 120 ದಿನಗಳಿಗೆ ಬಡ್ಡಿ ದರ ಶೇ 0.5ರಷ್ಟು ತಗ್ಗಿದ್ದು ಶೇ 8.50ಕ್ಕೆ ಇಳಿಕೆಯಾಗಿದೆ. 121ರಿಂದ 179 ದಿನಗಳ ಠೇವಣಿ ಬಡ್ಡಿ ದರ ಶೇ 0.25ರಷ್ಟು ಕಡಿತ ಮಾಡಲಾ­ಗಿದ್ದು ಶೇ 8.75ಕ್ಕೆ ತಗ್ಗಿದೆ ಎಂದು ಬ್ಯಾಂಕ್‌ ಪ್ರಕ ಟಣೆ ತಿಳಿಸಿದೆ.ಶೇ 9.10ರಷ್ಟಿದ್ದ 12 ವರ್ಷಗಳ ನಿಶ್ಚಿತ ಠೇವಣಿ ಬಡ್ಡಿ ದರ ಶೇ 9ಕ್ಕೆ ಇಳಿದಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಅ. 29ರಂದು ಪ್ರಕಟಿಸಿದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಸಾಲಗಳ ಬಡ್ಡಿ (ರೆಪೊ) ದರವನ್ನು ಶೇ 0.25ರಷ್ಟು ಹೆಚ್ಚಿಸಿತ್ತು. ಬಡ್ಡಿದರ ಪರಿಷ್ಕರಣೆ ಇದು ಪ್ರಮುಖ ಕಾರಣ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)