ಸರ್ಕಾರದ ದೂರದೃಷ್ಟಿ ಕೊರತೆಯಿಂದ ಇತ್ತೀಚೆಗೆ ಕೆಲ ಯೋಜನೆಗಳು ಯಶಸ್ವಿಯಾಗದಿರುವುದು ಸಾಮಾನ್ಯವಾಗಿದೆ. ಇಂತಹ ಘಟನೆಯೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಕುಡಿಯುವ ನೀರಿನ ಯೋಜನೆಯಾದ `ರಾಜೀವ್ ಗಾಂಧಿ ಸಬ್ ಡಿವಿಜನ್ ಯೋಜನೆ'ಯಿಂದಾಗಿದೆ.

ಭದ್ರಾ ಜಲಾಶಯದ ಅಚ್ಚುಕಟ್ಟಿಗೆ ಒಳಪಡುವ ಕೊನೆ ಭಾಗದ ಕೆರೆಯಾಗಿದೆ. ಇಲ್ಲಿಗೆ ನೀರು ಬಂದು ತಲುಪುವುದೇ ಕೊನೆಗೆ. ಇಂತಹ ಕೆರೆಯಿಂದ ನೀರನ್ನು ಮೇಲೆತ್ತಿ ಕುಡಿಯುವ ನೀರಿಗಾಗಿ ಬಳಸಲು `ರಾಜೀವ್ ಗಾಂಧಿ ಸಬ್ಡಿವಿಜನ್ ಯೋಜನೆ ` ಅಡಿ ಸುಮಾರು ರೂ 677.71 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಯೋಜನೆಯಿಂದ ಕೊಂಡಜ್ಜಿ ಸೇರಿದಂತೆ, ಬುಳ್ಳಾಪುರ, ಕೆಂಚನಹಳ್ಳಿ, ಕುರುಬನಹಳ್ಳಿ, ಹೊಟ್ಟಿಗನಹಳ್ಳಿ, ಸಾರಥಿ, ಗುತ್ತೂರು, ಗಂಗನರಸಿ, ದಿಟೂರು, ಪಾಮೆನಹಳ್ಳಿ. ಅಮರಾವತಿ ಸೇರಿ 11 ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಯೇನೂ ಸರಿ ಇದೆ.

ಆದರೆ ಸರ್ಕಾರದ ಮುಂದಾಲೋಚನೆ ಕೊರತೆಯಿಂದ ಇಲ್ಲಿನ ರೈತರಿಗೆ ತೊಂದರೆಯಾಗಿದೆ. ಈ ಯೋಜನೆಯೂ ಇಲ್ಲಿಯ ರೈತರಿಗೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತಾಗಿದೆ. ಏಕೆಂದರೆ ಕುಡಿಯುವ ನೀರು ಸಿಕ್ಕಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಈ ಕೆರೆಯನ್ನೇ ನಂಬಿಕೊಂಡು ಸಾವಿರಾರು ಎಕರೆ ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದ ರೈತರಿಗೆ ಕಷ್ಟ ಬಂದಂತಾಗಿದೆ.

ಈ ಯೋಜನೆ ಜಾರಿಯಾಗುವಾಗ ರೈತರು ವಿರೋಧಿಸಿದ್ದರು. ಆದರೆ ಒಪ್ಪಿಕೊಳ್ಳಲು ಕೆಲವು ಕಾರಣಗಳಿದ್ದವು. ಅವುಗಳೆಂದರೆ: 1. ಈ ಕೆರೆ ಭದ್ರಾ ಜಲಾಶಯದ ಕೊನೆ ಭಾಗದ ಕೆರೆಯಾಗಿದ್ದರಿಂದ ಈ ಯೋಜನೆಯಿಂದಾದರೂ ನಮ್ಮೂರ ಕೆರೆಗೆ ವರ್ಷ ಪೂರ್ಣ ತುಂಬಿ ಹರಿಯಬಹುದೆಂಬ ಆಸೆ ರೈತರಲ್ಲಿ ಇತ್ತು. 2. ಯೋಜನೆ ಕಾರ್ಯ ಆರಂಭಗೊಂಡಾಗ, ರೈತರ ಬೆಳೆಯ ನೀರೇನು ಕುಡಿಯುವ ನೀರಿಗೆ ಉಪಯೋಗಿಸುವುದಿಲ್ಲ. ಬದಲಾಗಿ ರೈತರಿಂದ ಹೆಚ್ಚುವರಿಯಾದ ನೀರನ್ನು ಮಾತ್ರ ಯೋಜನೆಗೆ ಬಳಸಲಾಗುವುದು ಎಂದು ಹೇಳಲಾಗುತಿತ್ತು. 3. ಈ ಕೆರೆಗೆ ಹರಿಹರದ ತುಂಗಾ ಭದ್ರಾ ನದಿಯಿಂದ ಕೊಂಡಜ್ಜಿ ಕೆರೆಗೆ ನೀರನ್ನು ಲಿಫ್ಟ್ ಮಾಡಿ ನಂತರ ಕುಡಿಯುವ ನೀರನ್ನು 11 ಹಳ್ಳಿಗೆ ಬಿಡಲಾಗುವುದು ಎಂದು ಹೇಳಿದ್ದರು.

ಆದರೆ ಈಗ ಈ ಯೋಜನೆ ಪೂರ್ಣಗೊಂಡು ಎಲ್ಲಾ ಹಳ್ಳಿಗಳಿಗೆ ಪೂರೈಕೆಯಾಗುತ್ತಿದ್ದರೂ, ಯಾವ ನದಿಯಿಂದಾಗಲಿ ಅಥವಾ ಯಾವುದೇ ಜಲಾಶಯದಿಂದಲೂ ನೇರವಾಗಿ ಕೆರೆಗೆ ನೀರು ತುಂಬಿಸುತ್ತಿಲ್ಲ. ಈ ಯೋಜನೆ ಬರುವುದಕ್ಕಿಂತ ಮುಂಚೆ ಇದ್ದ ಪ್ರಮಾಣದಲ್ಲಿಯೇ ಕೆರೆಗೆ ನೀರು ಬರುತ್ತಿದೆ. ರೈತರ ಬೆಳೆಗೆ ಬರಬೇಕಾಗಿದ್ದ ನೀರು ಕುಡಿಯುವ ನೀರಿಗೆ ಹೋಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಈ ಕೆರೆಗೆ ಕುಡಿಯುವ ನೀರಿನ ಯೋಜನೆ ಅಳವಡಿಸಿದ್ದರಿಂದ ವರ್ಷದ ಎರಡು ಬೆಳೆ ಬತ್ತ ಬೆಳೆಯತ್ತಿದ್ದ ರೈತರು ಈ ವರ್ಷ ಮಳೆಗಾಲದಲ್ಲಿಯೇ ಬತ್ತ ಬೆಳೆಯಲು ಪರದಾಡುವಂತಾಗಿದೆ. ಈ ಸಮಸ್ಯೆಗೆ ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಹಾರಿಕೆಯ ಉತ್ತರ ನೀಡುತ್ತಿದ್ದರೆ. ಚುನಾವಣೆಯಲ್ಲಿ ಮಾತ್ರ ಜನರ ಸಮಸ್ಯೆಗಳನ್ನು ಆಲಿಸುವ ರಾಜಕಾರಣಿಗಳು ಈ ಕಡೆ ಗಮನ ಹರಿಸಿ ಸಂಕಷ್ಟದಲ್ಲಿರುವ ರೈತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.