ದಿನ ಭವಿಷ್ಯ: ಈ ರಾಶಿಯವರ ಗೃಹ ವಿವಾದಗಳು ಉಪಶಮನವಾಗುವುದು
Published 14 ಅಕ್ಟೋಬರ್ 2025, 0:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯವಹಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ಹೊಸ ಸ್ಥಾನ ಅಥವಾ ಹೊಸ ಮನೆಗೆ ಹೋಗುವ ಯೋಚನೆ ಬರಲಿದೆ. ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ. ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ.
ವೃಷಭ
ಸಸ್ಯಗಳ ಉತ್ಪತ್ತಿ ವಸ್ತುಗಳ ಮಾರಾಟಗಾರರಿಗೆ ಹಾಗೂ ನರ್ಸರಿ ಹೊಂದಿರುವವರಿಗೆ ಲಾಭದ ದಿನ. ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುವ ಹೊಣೆ ನಿಮ್ಮದಾಗುವುದು. ಹಣಕಾಸಿನ ಕೊರತೆ ಇರುವುದಿಲ್ಲ.
ಮಿಥುನ
ಅನೇಕ ವಿಚಾರಗಳನ್ನು ಸಮರ್ಥವಾಗಿ ನಿರ್ವಹಿಸುವ ಕಾರ್ಯ ನಿರ್ವಹಣಾವೈಖರಿಗೆ ಉತ್ತಮ ಮಾತುಗಳನ್ನು ಕೇಳುವಿರಿ. ಸಹೋದರ ಬಳಗದ ವ್ಯಕ್ತಿಗಳಿಂದ ಆರ್ಥಿಕ ಸಹಾಯದ ಯಾಚನೆ ಬರಲಿದೆ.
ಕರ್ಕಾಟಕ
ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಕೆಲಸಗಳು ನಿಧಾನವಾಗಿ ಸಾಗಲಿವೆ. ಬಾಕಿ ಸಂದಾಯವಾಗುವುದು. ಶತ್ರುಗಳ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು.
ಸಿಂಹ
ರಾಜಕಾರಣದಲ್ಲಿ ಸಮಯ ಕಳೆಯುವಿರಿ. ತಂದೆಯ ಆರೋಗ್ಯ ಪರಿಸ್ಥಿತಿಗಳು ಸದ್ಯದಲ್ಲೇ ಸುಧಾರಿಸಲಿವೆ. ಕೆಲಸಕ್ಕೆ ಸೂಕ್ತ ಗೌರವಾದರಗಳು ದೊರೆಯಲಿದ್ದು ಆಶ್ಚಯ ಎನಿಸಬಹುದು.
ಕನ್ಯಾ
ಮಹತ್ವಕಾಂಕ್ಷೆ ಈಡೇರಿಕೆಯತ್ತ ಸಕಾರಾತ್ಮಕ ದೃಷ್ಟಿಕೋನವಿರಲಿ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ವೃತ್ತಿರಂಗದಲ್ಲಿ ಸಮಾಧಾನದ ವಾತಾವರಣದಿಂದ ಕೆಲಸ ಕಾರ್ಯಗಳು ಸಾಗಲಿವೆ.
ತುಲಾ
ವ್ಯವಹಾರಿಕವಾಗಿ ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ. ಹಿಂಜರಿಕೆಯ ಸ್ವಭಾವ ಬಿಟ್ಟು ಕಾರ್ಯ ಕೈಗೊಳ್ಳಲು ಮುಂದಾಗಿ. ಗುತ್ತಿಗೆದಾರರಿಗೆ ಶುಭ ಸುದ್ದಿ ಕೇಳಿಬರಲಿದೆ. ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗುವುದು.
ವೃಶ್ಚಿಕ
ಎಲ್ಲರೊಂದಿಗೆ ಬೆರೆಯುವ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂದರ್ಭ ಬರಲಿದೆ. ಷೇರು ವ್ಯಾಪಾರವು ಅದೃಷ್ಟದಾಯಕ . ಆರೋಗ್ಯ ಉತ್ತಮವಾಗಿರುವುದು. ಬಿಳಿ ಬಣ್ಣ ಅದೃಷ್ಟ ತರುವುದು.
ಧನು
ಮೋಸದ ವ್ಯವಹಾರ ಹಾಗೂ ಕಾನೂನುಬಾಹಿರ ಸಂಗತಿಗಳಲ್ಲಿ ಕೈಹಾಕು ವುದನ್ನು ಬಿಟ್ಟುಬಿಡಿ. ಮಕ್ಕಳ ದುಡಿಮೆಯಿಂದ ಬರುತ್ತಿರುವ ಹಣದ ಮೂಲದ ಬಗ್ಗೆ ಗಮನಹರಿಸಿ. ಹಳೆ ವಿಷಯ ನೆನಪಿಸಿಕೊಳ್ಳಬೇಡಿ
ಮಕರ
ಅಚ್ಚರಿಯನ್ನು ಉಂಟು ಮಾಡಬಹುದು. ಅಪರೂಪದ ಸಮಾರಂಭಕ್ಕೆ ಆಹ್ವಾನ ಬರುವುದು. ಹಾಲು ಮಾರಾಟಗಾರರಿಗೆ ಲಾಭವಿದೆ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು.
ಕುಂಭ
ವ್ಯವಹಾರಗಳಲ್ಲಿ ಹಿಡಿತವನ್ನು ಸಾಧಿಸಿದ್ದೀರಿ. ಉತ್ಸಾಹದಿಂದ ಹೆಜ್ಜೆಗಳನ್ನಿರಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ, ಲಾಭವಾಗುವುದು. ಗೃಹ ವಿವಾದಗಳು ಉಪಶಮನವಾಗುವುದು.
ಮೀನ
ರಾಜಕಾರಣಿಗಳಿಗೆ ನಾಯಕತ್ವದಲ್ಲಿ ಬದಲಾವಣೆಯಾಗುವ ಸಂಭವ ಇದೆ. ಹಣದ ಕಡೆ ಪ್ರಾಮುಖ್ಯ ಕೊಡುವುದಕ್ಕಿಂತ ಹೆಸರು ಸಂಪಾದಿಸಲು ಗಮನಹರಿಸಿ. ಜಗಳದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಆಗಬಹುದು.