ಶುಕ್ರವಾರ, ಜನವರಿ 24, 2020
28 °C
ದೇವನಹಳ್ಳಿ: ಶಾಸಕ ಪಿಳ್ಳಮುನಿಶಾಮಪ್ಪ ಹೇಳಿಕೆ

ಕೆರೆ ಅಭಿವೃದ್ಧಿಗೆ ` 5 ಕೋಟಿ ಅನುದಾನ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ‘ತಾಲ್ಲೂಕು ವ್ಯಾಪ್ತಿಯಲ್ಲಿ ರುವ ಅರಣ್ಯ ಭೂಮಿಯ ರಕ್ಷಣೆಯ ಜೊತೆಗೆ ಅರಣ್ಯ ಪ್ರದೇಶದ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ಬೆಳೆಸಲು ಪ್ರತಿ ಯೊಬ್ಬರು ಮುಂದಾಗಬೇಕು’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಬಳಿಯಿರುವ ಅರಣ್ಯ ಇಲಾಖೆ ಕಚೇರಿ ಅವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿರುವ ಪ್ರಗತಿ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದ ನಂತರ ಮೊದಲ ಬಾರಿಗೆ ದೇವನಹಳ್ಳಿ ಸಿಹಿ ನೀರಿನ ಚಿಕ್ಕಕೆರೆಗೆ ಮೂರು ಕೋಟಿ ಅನುದಾನ ಬಿಡುಗಡೆಯಾಗಿದೆ.ಇದನ್ನು ವಾಯು ವಿಹಾರ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ತಾಲ್ಲೂಕಿನ ಇತರೆಡೆ ಕೆರೆ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನ ಮೀಸಲಿರಿಸ ಲಾಗಿದೆ. ಪ್ರಸ್ತುತ ಸಾವಕನಹಳ್ಳಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 35 ಎಕರೆ ಪ್ರದೇಶವನ್ನು ಎಂಭತ್ತಾರು ಲಕ್ಷ ರೂ ವೆಚ್ಚದಲ್ಲಿ ಎರಡೂವರೆ ಕಿಲೋ ಮೀಟರ್‌ ಅಂತರದಲ್ಲಿ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಅರಣ್ಯ ಸಚಿವರಿಂದ ಇದನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.ಅರಣ್ಯ ಉಪ ಸಂರಕ್ಷಣಾಧಿಕಾರಿ ವೆಂಕಟೇಶ ಮಾತನಾಡಿ, ವಾಕಿಂಗ್‌ ಟ್ರ್ಯಾಕ್‌ ಅಲ್ಲದೆ ನಿರ್ಮಿತಿ ಕೇಂದ್ರದ ವತಿಯಿಂದ ಅತಿಥಿ ಗೃಹ ನಿರ್ಮಾಣ ಕಾರ್ಯ ಚಾಲನೆಯಲ್ಲಿದೆ. ವಾಕಿಂಗ್‌ ಟ್ಯ್ರಾಕ್‌ ಕಾಮಗಾರಿ ಬಹುತೇಕ ಮುಗಿದಿದೆ. ಪ್ರಾದೇಶಿಕ ಮತ್ತು ಔಷಧಿ ತಳಿ ಸೇರಿ ಎರಡು ಸಾವಿರದ ನಾನ್ನೂರು ಸಸಿಗಳನ್ನು ಇಲ್ಲಿ ಬೆಳೆಸಲಾಗಿದೆ. ಎರಡನೆ ಹಂತದಲ್ಲಿ ಅರಣ್ಯ ಇಲಾಖೆ ಯ ಇನ್ನೂರು ಎಕರೆಗೂ ವಿಸ್ತರಿಸುವ ಗುರಿ ಇದೆ ಎಂದರು.ಬಯಲು ಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಆರ್‌.ಎನ್‌.ಕೃಷ್ಣ ಮೂರ್ತಿ ವಲಯ ಅರಣ್ಯಾಧಿಕಾರಿ ಶಾಂತಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)