ಮಂಗಳವಾರ, ಮೇ 24, 2022
25 °C

ಕೆರೆ ಪುನಶ್ಚೇತನಕ್ಕೆ ರೂ 5 ಕೋಟಿ: ಭಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ಪ್ರಸ್ತುತ ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಪಡಿಸುವ ಸಲುವಾಗಿ ಅಲ್ಲಿ ಕಿರು ಸೇತುವೆಗಳ ನಿರ್ಮಾಣ, ಮದಗ ಹಾಗೂ ಕೆರೆಗಳ ಪುನಶ್ಚೇತನಕ್ಕಾಗಿ ಪ್ರತಿ ಕ್ಷೇತ್ರಕ್ಕೆ ತಲಾ ರೂ. 5 ಕೋಟಿ ಮೀಸಲಿರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.ಪಟ್ಟಣದ ನಾರಾಯಣಗುರು ಸಭಾಭವನದಲ್ಲಿ ಶನಿವಾರ ನಡೆದ ಉಪ್ಪೂರು, ಹಾವಂಜೆ, ಮೂಡುತೋನ್ಸೆ, ಪಡುತೋನ್ಸೆ, 52ನೇ ಹೇರೂರು, ಚಾಂತಾರು, ಹಂದಾಡಿ, ಹಾರಾಡಿ, ಬೈಕಾಡಿ, ವಾರಂಬಳ್ಳಿ, ಮಟಪಾಡಿ, ಕುಮ್ರಗೋಡು, ಆರೂರು, ನೀಲಾವರ ಗ್ರಾಮಗಳ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.ಗ್ರಾಮೀಣ ಭಾಗಗಳಲ್ಲಿರುವ ಹಂದಾಡಿ ಕೆರೆ, ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಹಾಗೂ ಚಾಂತಾರು ಮದಗ ಪ್ರದೇಶ ಅಭಿವೃದ್ಧಿ ಪಡಿಸಲಾಗುವುದು ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವದಾಸ ಹೆಬ್ಬಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಿ. ಮಂಜುನಾಥಯ್ಯ, ಮೈಸೂರು ಟೊಬೆಕೋ ನಿಗಮ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ತಾ.ಪಂ.ಸದಸ್ಯರಾದ ಉಮೇಶ್ ನಾಯ್ಕ ಚೇರ್ಕಾಡಿ, ವೆರೋನಿಕ ಕರ್ನೇಲಿಯೋ, ಉಷಾ ಪೂಜಾರಿ, ಕೇಶವ ಕುಮಾರ್, ವಾರಂಬಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್. ನಾರಾಯಣ್, ಚಾಂತಾರು ಗ್ರಾ.ಪಂ.ಅಧ್ಯಕ್ಷೆ ಜಯಂತಿ ವಾಸುದೇವ್, ಸುಜಾತ, ಹಾರಾಡಿಯ ಜಯಂತಿ, ರಘುರಾಮ ಶೆಟ್ಟಿ, ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.ಸಮಯಪ್ರಜ್ಞೆ ಇಲ್ಲ: ಸಾಮಾನ್ಯವಾಗಿ ಜನಸ್ಪಂದನ ಆರಂಭವಾದ ದಿನಗಳಲ್ಲಿ ಸರಿಯಾದ ಸಮಯ ಅಲ್ಲದಿದ್ದರೂ ಅರ್ಧ ಗಂಟೆ ತಡವಾಗಿಯಾದರೂ ಕಾರ್ಯಕ್ರಮ ಆರಂಭವಾಗುತ್ತಿತ್ತು. ಆದರೆ ಈಗ 10 ಗಂಟೆಗೆ ಆರಂಭವಾಗಬೇಕಿರುವ ಕಾರ್ಯಕ್ರಮ ಒಂದೂವರೆ ಗಂಟೆ ಅಥವಾ ಇನ್ನೂ ತಡವಾಗಿ ಆರಂಭವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.  ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಕ್ಲಪ್ತ ಸಮಯಕ್ಕೆ ಹಾಜರಿದ್ದರೂ ಜನಪ್ರತಿನಿಧಿಗಳು ಸ್ವಲ್ಪ ಉದಾಸೀನತೆ ತೋರಿಸಿದಂತೆ ಭಾಸವಾಗುತ್ತಿದೆ. ಜನಪ್ರತಿನಿಧಿಗಳು ಬಾರದೇ ಸಮಾರಂಭಕ್ಕೆ ಚಾಲನೆ ಕೂಡಾ ದೊರೆಯುವುದಿಲ್ಲ. ಇಂತಹ ಕಾರ್ಯಕ್ರಮಗಳು ಏಕೆ ಬೇಕು ಎನ್ನುವ ಪ್ರಶ್ನೆ ಗ್ರಾಮಸ್ಥರಿಂದ ಕೇಳಿ ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.