ಮುಂಬೈ (ಪಿಟಿಐ): ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗಾಯಗೊಳ್ಳದಂತೆ ಎಚ್ಚರ ವಹಿಸುವ ಕಾರಣ 2014 ರಲ್ಲಿ ನಡೆಯಲಿರುವ ಕೆಲ ಟೂರ್ನಿಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ‘ಈ ವರ್ಷ ನಾನು ಸಾಕಷ್ಟು ಪಂದ್ಯಗಳನ್ನಾಡಿದ್ದೇನೆ. ಆದರೆ ಮುಂದಿನ ವರ್ಷ ನನ್ನ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು ಪ್ರಮುಖ ಟೂರ್ನಿ ಗಳಲ್ಲಿ ಉತ್ತಮ ಪ್ರದರ್ಶನ ತೋರ ಬೇಕಿದೆ. ಹೀಗಾಗಿ ಕೆಲ ಟೂರ್ನಿ ಗಳನ್ನು ಕೈಬಿಡಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಈ ಮದ್ಯೆ ನನ್ನ ತೂಕವೂ ಹೆಚ್ಚಾಗಿದ್ದು, ಇದು ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಂದು ತಿಂಗಳ ಒಳಗಾಗಿ ಆಡಲು ಸಮರ್ಥಳಾ ಗಲಿದ್ದೇನೆ. ಮುಂದಿನ ಟೂರ್ನಿಗಳಲ್ಲಿ ಈ ಸಾಮರ್ಥ್ಯವನ್ನು ಮುಂದುವರೆಸಿ ಕೊಂಡು ಹೋಗುವ ವಿಶ್ವಾಸವಿದೆ ’ಎಂದರು.
‘ಮುಂದಿನ ವರ್ಷ ಕಡಿಮೆ ಸಂಖ್ಯೆ ಯ ಟೂರ್ನಿಗಳಲ್ಲಿ ಪಾಲ್ಗೊಂಡು ತರಬೇತಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೇನೆ.

ಈ ವರ್ಷ ಸಾಕಷ್ಟು ಟೂರ್ನಿಗಳಲ್ಲಿ ಭಾಗವಹಿಸಿದ ಕಾರಣ ತರಬೇತಿಗೆ ಒತ್ತು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಸಾಮರ್ಥ್ಯವೂ ಕ್ಷೀಣಿಸಿತು’ ಎಂದು ಹೇಳಿದ್ದಾರೆ. ‘ಮುಂಬರುವ ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾ ಕೂಟಗಳು ಪ್ರಮುಖವಾದವುಗಳಾಗಿದ್ದು, ಏಷ್ಯನ್ ಕ್ರೀಡಾಕೂಟದಲ್ಲಿ ಬಂಗಾರ ಜಯಿಸು ವುದು ನನ್ನ ಗುರಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.