ಗುಲ್ಬರ್ಗ: ನಗರದ ಆರು ಕಾಲೇಜು ಗಳಲ್ಲಿ ಭಾನುವಾರ ನಡೆದ ಕರ್ನಾ ಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆಸೆಟ್)ಯನ್ನು ಏಳು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಬರೆದರು.

ಅಧಿಕೃತ ನೋಡಲ್ ಕೇಂದ್ರಗಳಲ್ಲಿ ಒಂದಾಗಿರುವ ಗುಲ್ಬರ್ಗ ವಿಶ್ವ ವಿದ್ಯಾಲಯ ಅಡಿಯಲ್ಲಿ ಒಟ್ಟು 8,542 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಒಟ್ಟು 32 ವಿಷಯಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

‘ಏಳು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರೀಕ್ಷೆಗಳನ್ನು ಯಶಸ್ವಿ ಯಾಗಿ ನಡೆಸಲು ನೂರಾರು ಸಿಬ್ಬಂದಿ ಪರಿಶ್ರಮ ವಹಿಸಿದ್ದಾರೆ’ ಎಂದು ಕೆಸೆಟ್ ಪರೀಕ್ಷೆಗಳ ನೋಡಲ್ ಅಧಿ ಕಾರಿ ಪ್ರೊ. ಲಕ್ಷ್ಮಣ ರಂಜೋಳಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಲ್ಬರ್ಗ ವಿ.ವಿ.ಮುಖ್ಯ ಕ್ಯಾಂಪಸ್, ಎನ್.ವಿ. ಕಾಲೇಜು, ಸರ್ಕಾರಿ ಕಾಲೇಜು, ಎಸ್.ಬಿ. ಕಾಲೇಜು, ಡಾ. ಬಿ.ಆರ್. ಅಂಬೇ ಡ್ಕರ್ ಕಲಾ ಮತ್ತು ಕಾಲೇಜಿ ನಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆ ಯಲು ವ್ಯವಸ್ಥೆ ಮಾಡಲಾಗಿತ್ತು’ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಅಭ್ಯರ್ಥಿ ಗಳಿಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

2012ರಲ್ಲಿ ನಡೆದ ಕೆಸೆಟ್ ಪರೀಕ್ಷೆಯಲ್ಲಿ 27 ಸ್ನಾತಕೋತ್ತರ ವಿಷಯಗಳನ್ನು ಸೇರ್ಪಡೆ ಮಾಡ ಲಾಗಿತ್ತು. ಈ ಸಲ ವಿಷಯಗಳ ಸಂಖ್ಯೆಯೂ ಹೆಚ್ಚಿದೆ; ಹಾಗೂ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ, ಪರಿಸರ ವಿಜ್ಞಾನ ಸೇರಿದಂತೆ ಐದು ವಿಷಯ ಗಳನ್ನು ಕೆಸೆಟ್ಗೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.