ಶುಕ್ರವಾರ, ಜೂನ್ 25, 2021
26 °C

ಕೇಜ್ರಿವಾಲ್‌ಗೆ ಹಕ್ಕುಚ್ಯುತಿ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯ ಅರವಿಂದ ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್ ಸಂಸದ ಸಜ್ಜನ್ ಸಿಂಗ್ ವರ್ಮಾ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.ಕೇಜ್ರಿವಾಲ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿರುವ ಎರಡನೇ ಪ್ರಕರಣ ಇದಾಗಿದೆ.ಉತ್ತರ ಪ್ರದೇಶ ಈಚೆಗೆ ನಡೆದ ಚುನಾವಣಾ ಪ್ರಚಾರದ ವೇಳೆ, ಗಾಜಿಯಾಬಾದ್‌ನಲ್ಲಿ ನಡೆದ  ಜನಜಾಗೃತಿ ರ‌್ಯಾಲಿಯೊಂದರಲ್ಲಿ ಸಂಸದರನ್ನು ಕುರಿತು ಅತ್ಯಾಚಾರಿಗಳು, ಕೊಲೆಗಡುಕರು ಮತ್ತು ಲೂಟಿಕೋರರು ಎಂಬ ಟೀಕೆಯನ್ನು ಕ್ರೇಜಿವಾಲ್ ಮಾಡಿದ್ದಾರೆ. ಇದರಿಂದ ಸಂಸದರ ಗೌರವ- ಘನತೆಗೆ ಧಕ್ಕೆ ಉಂಟಾಗಿದೆ ಎಂದು ಮಧ್ಯಪ್ರದೇಶದ ದಿವಾಸ್ ಕ್ಷೇತ್ರದ ಸಂಸದ ಸಜ್ಜನ್ ಸಿಂಗ್ ವರ್ಮಾ ಈ ನೋಟಿಸ್ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.