ಭಾನುವಾರ, ಜನವರಿ 19, 2020
29 °C
ಈ ಗ್ರಾಮದಲ್ಲಿ ವಿಶೇಷ ಉತ್ಸವ

ಕೇವಲ ಪುರುಷರಿಗಾಗಿ ಜಾತ್ರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಸಮೀಪದ ಸತ್ತಿಗೀಹಳ್ಳಿ ಗ್ರಾಮದ ಶ್ರೀ ಬೂದೇಶ್ವರ ಮಠದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಮಹೇಶ್ವರ ಜಾತ್ರಾ ಮಹೋತ್ಸವ ನಡೆಯಿತು.ಜಾತ್ರೆಯ ವಿಶೇಷವೆಂದರೆ ಈ ಜಾತ್ರೆಯಲ್ಲಿ ಕೇವಲ ಪುರುಷರು ಮಾತ್ರ ಭಾಗವಹಿಸಿದ್ದರು. ಇಂತಹ ಪದ್ಧತಿ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ.ಮಂಗಳವಾರ ಬೆಳಿಗ್ಗೆ ಹಿರೇಮೊರಬ ಗ್ರಾಮದಿಂದ ಆಗಮಿಸಿದ್ದ ವಿವಿಧ ದೇವರುಗಳ ಪ್ರತಿಷ್ಠಾಪನೆಯೊಂದಿಗೆ ಮಹೇಶ್ವರನ ಉತ್ಸವ ಜರುಗಿತು.ಕೆ.ಎಂ.ಬೂದಯ್ಯ ಸ್ವಾಮೀಜಿ ಮತ್ತು ಕೆ.ಎಂ.­ವಿರುಪಾಕ್ಷಯ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ವಿಶೇಷ ಪ್ರಸಾದ ವಿತರಣೆ ನಡೆಯಿತು.ಬುಧವಾರ ನಡೆಯುವ ಜಾತ್ರೆಯಲ್ಲಿ ಮಹಿಳೆಯರು ಸೇರಿದಂತೆ ಸುತ್ತಮುತ್ತಲ ಗ್ರಾಮದವರೆಲ್ಲರೂ  ಭಾಗವಹಿಸುತ್ತಾರೆ. 

ಪ್ರತಿಕ್ರಿಯಿಸಿ (+)