ಗುರುವಾರ , ಮೇ 13, 2021
38 °C

ಕೈಕೊಟ್ಟ ಕ್ಯಾಪ್ಸಿಕಂ ಬೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಈಗ ಬೆಲೆ ಇಳಿಕೆ ಸರದಿ ದೊಣ್ಣೆ ಮೆಣಸಿನ ಕಾಯಿಯದು. ತಾಲ್ಲೂಕಿನಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ಕ್ಯಾಪ್ಸ್‌ಕಂ ಬೆಳೆಯ ಲಾಗಿದೆ. ಆದರೆ ಉತ್ಪನ್ನಕ್ಕೆ ಬೆಲೆ ಇಳಿಕೆ ಪ್ರಾರಂಭವಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.  ತಾಲ್ಲೂಕಿನ ಮಟ್ಟಿಗೆ ಕ್ಯಾಪ್ಸ್‌ಕಂ ಒಂದು ಆರ್ಥಿಕ ತರಕಾರಿ ಬೆಳೆ. ಬೆಳೆಯುವುದು ಸುಲಭದ ಮಾತಲ್ಲ. ಉತ್ತಮ ಫಸಲನ್ನು ಪಡೆಯ ಬೇಕಾದರೆ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ಗಿಡಕ್ಕೆ ರೋಗ ಅಥವಾ ಕೀಟ ಬಾಧೆ ತಾಕದಂತೆ ಎಚ್ಚರ ವಹಿಸಬೇಕು. ಗಿಡ ಸಮೃದ್ಧವಾಗಿ ಬೆಳೆಯಬೇಕಾದರೆ ಭೂಮಿಗೆ ಕಾಂಪೋಷ್ಟ್ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ ಕೊಡಬೇಕು. ಅಧಿಕ ಬೆಲೆಯ ಔಷಧಿ ಸಿಂಪಡಣೆ ಮಾಡಬೇಕು. ಇಷ್ಟು ಮಾಡಿ ಉತ್ತಮ ಫಸಲು ಪಡೆದರೂ ಬೆಲೆ ಕೈಕೊಟ್ಟರೆ ಶ್ರಮವೆಲ್ಲ ನೀರಿನ ಮೇಲೆ ಹೋಮ ಮಾಡಿದಂತೆ.ಹಿಂದೆ ಚೆನ್ನೈ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕ್ಯಾಪ್ಸ್‌ಕಂ ರೂ. 20ರಿಂದ 25ರವರೆಗೆ ಮಾರಾಟ ವಾಗುತ್ತಿತ್ತು. ಈಗ ಕೆ.ಜಿ.ಗೆ ರೂ. 10ರಿಂದ 12ರಂತೆ ಖರೀದಿಸಲಾಗು ತ್ತಿದೆ. ಈ ಬೆಲೆಯಲ್ಲಿ ಹಾಕಿದ ಬಂಡವಾಳವೂ ಕೈಗೆ ಬರುವುದಿಲ್ಲ ಎಂಬುದು ರೈತರ ಅಳಲು. ಉತ್ಪನ್ನಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ. ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ  ಇದನ್ನು ಹೆಚ್ಚಾಗಿ ಖರೀದಿಸುತ್ತಾರೆ. ಆದರೆ ಬೆಲೆ ಏರುಪೇರಿನಿಂದ ಬೆಳೆಗಾರರು ಬೇಸತ್ತಿದ್ದಾರೆ.ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಇಲ್ಲದಿರುವು ದರಿಂದ ದೊಣ್ಣೆ ಮೆಣಸಿನ ಕಾಯಿ ಬೆಳೆಗೆ ಉತ್ತಮ ವಾತಾರಣ ನಿರ್ಮಾಣವಾಗಿದೆ. ಕೊಳವೆ ಬಾವಿಗಳ ಸಮೀಪ ದೊಣ್ಣೆ ಮೆಣಸಿನ ಕಾಯಿ ಬೆಳೆಯುವವರ ಸಂಖ್ಯೆ ಹೆಚ್ಚಿದೆ. ಈ ಪರಿಸ್ಥಿತಿ ಉಳಿದೆಡೆಗಳಲ್ಲೂ ಸಾಮಾನ್ಯ ವಾಗಿರುವುದರಿಂದ ಮಾರುಕಟ್ಟೆಗೆ ಇದರ ಆವಕದ ಪ್ರಮಾಣ ಹೆಚ್ಚಿದೆ. ಇದು ಬೆಲೆ ಇಳಿಕೆಗೆ ಕಾರಣ ಎಂಬುದು ವ್ಯಾಪಾರಿಗಳ ಅಭಿಪ್ರಾಯ. ಒಟ್ಟಾರೆ ರೈತರ ಅದೃಷ್ಟ ಚೆನ್ನಾಗಿದ್ದಂತೆ ಕಾಣುತ್ತಿಲ್ಲ. ಸಾವಿರಾರು ಎಕರೆಗಳಲ್ಲಿ ಬೆಳೆಯ ಲಾಗಿದ್ದ ಟೊಮೆಟೊಗೆ ಬೆಲೆ ಕುಸಿತ ಉಂಟಾಗಿ ಹಾಕಿದ ಬಂಡವಾಳವೂ ಕೈಗೆ ಬರಲಿಲ್ಲ. ಕೋಸು ಬೆಳೆದವರೂ ಕೈ ಸುಟ್ಟುಕೊಂಡರು. ಬದನೆಕಾಯಿ, ಹೀರೆಕಾಯಿ, ಬೀನ್ಸ್, ಕ್ಯಾರೆಟ್, ನವಿಲು ಕೋಸು ಮುಂತಾದ ತರಕಾರಿ ಬೆಳೆದವರಿಗೂ ಲಾಭವಾಗಲಿಲ್ಲ. ಗಣೇಶನ ಹಬ್ಬಕ್ಕೆ ಅಟ್ಟ ಏರಿದ್ದ ಚೆಂಡು ಹೂವಿನ ಬೆಲೆ ಈಗ ಮುಗ್ಗರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.