ಕೈಕೊಟ್ಟ ಮುಂಗಾರು: ವರುಣನತ್ತ ದೃಷ್ಟಿ ನೆಟ್ಟ ರೈತ
ನರಗುಂದ: ಮೊದಲೇ ಬರಗಾಲದಿಂದ ಬಸವಳಿದ ತಾಲ್ಲೂಕು ಈಗ ಮತ್ತೇ ಮುಂಗಾರು ಮಳೆ ಕೈ ಕೊಡುವ ಮೂಲಕ ರೈತರನ್ನು ಆತಂಕಕ್ಕೆ ಈಡು ಮಾಡಿದೆ.
ರೈತರ ಚಿತ್ತ ದಿನವಿಡಿ ವರುಣನತ್ತ ಎನ್ನುವಂತಾಗಿದೆ. ಮೇ ಅಂತ್ಯದೊಳಗೆ ಮುಂಗಾರು ಮಳೆ ಬಿದ್ದೀತು ಭೂಮಿಗೆ ಬೀಜ ಬಿತ್ತಿ ಫಸಲು ತಕ್ಕೋಬಹುದು ಎಂಬ ಆಶಾ ಭಾವನೆ ಹೊಂದಿದ್ದ ರೈತನ ಕನಸು ನನಸಾಗುವ ಲಕ್ಷಣಗಳು ಕಾಣು ತ್ತಿಲ್ಲ.
ದಿನದ 24 ತಾಸು ಬಿರುಗಾಳಿ ಬೀಸುವ ಮೂಲಕ ರೈತರನ್ನು ಇತ್ತ ತಣ್ಣಗೆಯೂ ಮಾಡದೇ ಬಿಸಿಯೂ ಮಾಡದಿರುವ ದು:ಸ್ಥಿತಿ ಉಂಟಾಗಿದೆ. ಕಳೆದ ವಾರದ ಹಿಂದೆ ತುಂತುರು ಹನಿ ಸುರಿಯುವ ಮೂಲಕ ಆಶಾ ಭಾವನೆ ಮೂಡಿಸಿದ್ದರಿಂದ ರೈತರೆಲ್ಲ ಹೊಲ ಹದ ಮಾಡಿ ಸಹಸ್ರಾರು ರೂಪಾಯಿಗಳನ್ನು ಖರ್ಚು ಮಾಡಿ ಬೀಜ ಗೊಬ್ಬರ ಸಿದ್ಧತೆ ಮಾಡಿ ಕೊಂಡಿದ್ದು, ಆದರೆ ಅದಕ್ಕೆ ಯಾವುದೇ ಪ್ರತಿಫಲ ನೀಡದ ವಾತಾವರಣ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಕಂಡು ಬರುತ್ತಿದೆ.
`ಈಗ ಬಿತ್ತಿದರ ಪಂಚಮಿ ಅನ್ನು ತ್ತಲೇ ಹೆಸರು ಬಂದ ಕೈಯಾಗ ರೊಕ್ಕ ಆಕ್ಕಿದ್ದವು. ಪಂಚಮಿ ಜೋರಾಕ್ಕೀತ್ತ ಎಂದು ಶಿವಮ್ಮ ಎನ್ನುವ ಮಹಿಳೆ ಮುಂಗಾರು ಮಳೆ ಆಗದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸುತ್ತಾಳೆ. ` ಹೀಂಗ ಆದರೆ ಮುಂದಿನ ಜೀವನ ಗುಳೆ ಹೋಗೂದು ಬರ್ತದ~ ಎಂಬ ರೈತ ಜಗ್ಗಪ್ಪನ ಮಾತು ಕೇಳಿದರ ವಾಸ್ತವ ಸ್ಥಿತಿ ಅರ್ಥವಾಗಿ ರೈತ ಸಂಕಷ್ಟಕೀಡಾ ಗಿದ್ದು ಕಾಣುತ್ತದೆ.
ಈಗ ಮಿರಗನ ಮಳೆ ಕೂಡಿದ್ದು ಅದು ಸಹಿತ ಕಳೆದ ನಾಲ್ಕು ದಿವಸ ಗಳಿಂದ ಆಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ರೈತರು ಉದ್ಯೋಗವ್ಲ್ಲಿಲದೇ ಕಟ್ಟೆ ಹಿಡಿದು ಕೂತರೆ, ಅಲ್ಲಲ್ಲಿ ಚೆಕ್ಕಾ ಮಣಿ, ಹುಲಿ ಮಣಿ ಆಡಿ ಕಾಲಹರಣ ಮಾಡುವುದು ಕಾಣುತ್ತದೆ.
ಗುಳೆ ಹೊರಟ ಗ್ರಾಮೀಣ ಜನತೆ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರೈತರು ಉದ್ಯೋಗವಿಲ್ಲದೇ ನಗರಗಳ ಕಡೆ ಗುಳೆ ಹೊರಡುತ್ತಿದ್ದಾರೆ. ಸರ್ಕಾರ ಬರಗಾಲಕ್ಕೆ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದೆ ಎನ್ನುತ್ತದೆ. ಆದರ ಅದರ ಭರಾಟೆ ಎಲ್ಲಿಯೂ ಕಾಣುತ್ತಿಲ್ಲ. ಇದರಿಂದ ಯುವಕರು ಬೇಸತ್ತಿದ್ದು, ಮನೆಗೆ ಭಾರವಾಗುವುದಕ್ಕಿಂತ ಎಲ್ಲಿಯಾ ದರೂ 10 ರೂಪಾಯಿ ದುಡಿದು ಬರುವುದೇ ಲೇಸೆಂದು ಗ್ರಾಮಗಳನ್ನು ಬಿಡುತ್ತಿದ್ದಾರೆ. ಆದ್ದರಿಂದ ತಾಲ್ಲೂಕು ಆಡಳಿತ ಬರಗಾಲ ಸಂದರ್ಭದ ಉದ್ಯೋಗಗಳನ್ನು ಕೂಡಲೇ ಆರಂಭ ಮಾಡಬೇಕಾಗಿದೆ. ಜನರ ನೆರವಿಗೆ ಬರ ಬೇಕಾಗಿದೆ. ತಾಲ್ಲೂಕು ಆಡಳಿತ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕ ವಾಗಿ ಜಾರಿ ತರುವ ಮೂಲಕ ಸರ್ಕಾರ ಗಳು ಗ್ರಾಮೀಣ ಜನರ ಸಂಕಷ್ಟ ಪರಿಹರಿಸಬೇಕಾಗಿದೆ. ಇದಕ್ಕೆ ತಾಲ್ಲೂಕು ಆಡಳಿತ ಲಕ್ಷ ಹರಿಸಬೇಕಾಗಿದೆ.
ಒಟ್ಟಾರೆ ಮುಂಗಾರು ಮಳೆ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಈಗಲಾದರೂ ಮುಂದಿನ ಬೆಳೆಗಾಗಿ ಕರುಣೆ ತೋರಿ ಮಳೆ ಬೀಳಬೇಕೆ ನ್ನುವುದು ರೈತರ ಆಶಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.