ಸದಾ ಕಾರ್ಪೊರೇಟ್ ಅತಿಥಿಗಳು ಮತ್ತು ಒಂದಿಲ್ಲೊಂದು ಸಮಾರಂಭದಿಂದ ಬ್ಯುಸಿಯಾಗಿರುತ್ತಿದ್ದ ಜಯನಗರದ ಪೈ ವೈಸ್ರಾಯ್ ಹೋಟೆಲ್ನ ಆ ಹಾಲ್ನಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ರಸ್ತೆ ಬದಿಯಲ್ಲಿ ಫಾಸ್ಟ್ಫುಡ್ ತಯಾರಿಸಿ ಕೊಡುವ ಕೈಗಾಡಿಗಳು `ಟೆಂಟ್' ಹಾಕಿಬಿಟ್ಟವು. ರಸ್ತೆಯಲ್ಲಿ ಹಾದುಹೋಗುವ ವಾಹನವಾಲಾಗಳು ಮತ್ತು ಮಂದಿ ಹೋಟೆಲ್ ಹೊರಗಿನ ವಿಶೇಷ ಸಿಂಗಾರ, ಪ್ರವೇಶದ್ವಾರದಲ್ಲಿ ಬೈಹುಲ್ಲಿನ ಚಪ್ಪರ ಕಂಡು ಅಚ್ಚರಿಪಟ್ಟರು. ಹೋಟೆಲ್ ಮುಂದಿನ ಫುಟ್ಪಾತ್ನಲ್ಲಿ ಹೂ ಕಟ್ಟುತ್ತಾ ಕುಳಿತಿದ್ದ ಮಹಿಳೆ ನಾಲ್ಕೈದು ಬಗೆಯ ಹೂಗಳನ್ನು ಸರಸರನೆ ಕಟ್ಟುತ್ತಲೇ `ಒಳಗೆ ಹೋಗಿ. ಕೈಗಾಡಿಯಲ್ಲಿ ಏನೇನೋ ಮಾಡ್ಕೊಡ್ತವ್ರೆ. ತಿಂದು ನೋಡಿ' ಅಂದಳು. ನೋಡಿಯೇ ಬಿಡೋಣ ಎಂದು ಆಸಕ್ತಿಯಿಂದ ಒಳಹೊಕ್ಕವರನ್ನು ಹೋಟೆಲ್ ಪ್ರವೇಶದ್ವಾರದ ಬಳಿ ಇಬ್ಬರು ಗಿಳಿಶಾಸ್ತ್ರದವರು `ಬನ್ನಿ, ನಿಮ್ಮ ಭವಿಷ್ಯ ತಿಳಿದುಕೊಳ್ಳಿ' ಎಂದು ಆಹ್ವಾನಿಸಿದರು. `ಪರವಾಗಿಲ್ಲ ಬಿಡಿ' ಎನ್ನುತ್ತಾ ಹಾಲ್ನೊಳಗೆ ಕಾಲಿಟ್ಟರೆ ಎಡಭಾಗದಿಂದ `ಕಬ್ಬಿನ ಹಾಲು ಕುಡೀರಿ ಬನ್ನಿ' ಎಂದು ಒಬ್ಬ, `ಎಳನೀರು ತಗೊಳ್ಳಿ' ಎಂದು ಇನ್ನೊಬ್ಬ ಉಪಚರಿಸಲು ನಿಂತಿದ್ದರು.
`ನಿಮ್ಮಲ್ಲಿ ಕೈಗಾಡಿಯ ಆಹಾರಗಳೂ ಸಿಗುತ್ತವಾ' ಎಂದು ಮತ್ತೊಬ್ಬರು ಕಣ್ಣರಳಿಸಿದರು.

ಹೋಟೆಲ್ನ ಪ್ರಧಾನ ವ್ಯವಸ್ಥಾಪಕ ಸುನಿಲ್ ಬಿ.ಎಂ. ಪ್ರತಿಕ್ರಿಯಿಸಿದ್ದು ಹೀಗೆ- `ಇದು ಈ ವರ್ಷದ ನಮ್ಮ ಆಹಾರೋತ್ಸವದ ಸ್ಪೆಷಲ್. ಕಳೆದ ಬಾರಿ ಗುಜರಾತ್ ಮತ್ತು ರಾಜಸ್ತಾನಿ ಆಹಾರೋತ್ಸವ ಮಾಡಿದ್ದೆವು. ಈ ಬಾರಿ ನಮ್ಮದೇ ಬೆಂಗಳೂರಿನ ಅವೆನ್ಯೂ ರಸ್ತೆ ಮತ್ತು ವಿ.ವಿ.ಪುರಂನಲ್ಲಿ ರಸ್ತೆ ಬದಿಯಲ್ಲಿ ಸಿಗುವ ಆಹಾರ ವೈವಿಧ್ಯವನ್ನು ಉತ್ತಮ ಗುಣಮಟ್ಟದೊಂದಿಗೆ ಕೊಡುವ ಉದ್ದೇಶದಿಂದ `ನಮ್ಮ ಬೆಂಗಳೂರು ಬೀದಿ ಆಹಾರೋತ್ಸವ' ಏರ್ಪಡಿಸಿದ್ದೇವೆ. ಇಡೀ ಹಾಲ್ ನೋಡಿದರೆ ವಿ.ವಿ. ಪುರಂನಲ್ಲೋ, ಅವೆನ್ಯೂ ರಸ್ತೆಯಲ್ಲೋ ನಿಂತ ಹಾಗೆ ಕಾಣೋದಿಲ್ವೇ? ಎಲ್ಲಾ ಗಾಡಿಯಲ್ಲೂ ಫಾಸ್ಟ್ಫುಡ್ನ ರುಚಿ ನೋಡಿ' ಎಂದು ಉಪಚರಿಸಿದರು.

`ಪಾನಿ ಪೂರಿ, ಗೋಬಿ ಮಂಚೂರಿ, ಅಕ್ಕಿ ರೊಟ್ಟಿ, ಬೇಬಿ ಕಾರ್ನ್ ಮಂಚೂರಿ, ಚೈನೀಸ್ ಫುಡ್, ವಡಾ ಪಾವ್, ಪಾವ್ ಬಾಜಿ, ಖಡಕ್ ಮಸಾಲಾ ದೋಸೆ, ರಾಗಿ ದೋಸೆ, ಪ್ಲೇನ್ ದೋಸೆ, ಪಕೋಡ, ಬಜ್ಜಿ, ಗೋಲ್ಗಪ್ಪ, ವಿವಿಧ ಹಣ್ಣುಗಳ ಹೋಳು, ಹಲಸಿನ ತೊಳೆ ಹೀಗೆ 70ಕ್ಕೂ ಹೆಚ್ಚು ತಿನಿಸುಗಳು ಈ ಆಹಾರೋತ್ಸವದಲ್ಲಿ ಲಭ್ಯ. ಬಿಸಿ ಬಿಸಿ ಹೋಳಿಗೆ, ಜಿಲೇಬಿಯನ್ನಂತೂ ನೀವು ಆರ್ಡರ್ ಕೊಟ್ಟ ತಕ್ಷಣ ನಿಮ್ಮೆದುರೇ ತಯಾರಿಸಿಕೊಡುತ್ತಾರೆ. ಪ್ರತಿಯೊಂದರಲ್ಲೂ ತಾಜಾತನ, ಸ್ವಚ್ಛತೆ ಮತ್ತು ಗುಣಮಟ್ಟವನ್ನು ಸವಿದು, ಅನುಭವಿಸಿಯೇ ತೀರಬೇಕು' ಎನ್ನುತ್ತಾರೆ ಹೋಟೆಲ್ನ ವ್ಯವಸ್ಥಾಪಕರಲ್ಲೊಬ್ಬರಾದ ಪುಷ್ಪರಾಜ್.

ಹಚ್ಚೆ, ಮೆಹೆಂದಿ, ಬಳೆ...
ಹಾಂ, ಮಕ್ಕಳಿಗೆ ವಿಶೇಷ ಮನರಂಜನೆ ನೀಡುವ ಉದ್ದೇಶದಿಂದ ತಳಮಹಡಿಯಲ್ಲಿ ಮೋಜಿನಾಟದ ಕೇಂದ್ರವನ್ನೂ ತೆರೆಯಲಾಗಿದೆ. ಮಕ್ಕಳು ಚಟ್ಪಟ್ ಅನ್ನುವ ಪಾಪ್ಕಾರ್ನ್ ಕೇಳಿದರೆ ಅಲ್ಲೇ ಪಡೆಯಿರಿ. ಕಾಟನ್ ಕ್ಯಾಂಡಿಯನ್ನೂ ಮೆಲ್ಲಬಹುದು. ಹೆಣ್ಣುಮಕ್ಕಳಿಗೆ ಕೈತುಂಬಾ ಬಳೆ ಹಾಕಿಕೊಳ್ಳಬೇಕು ಎಂದು ಆಸೆ ಇದರೆ ಅಲ್ಲೇ ಇರುವ ಟ್ರೇಯಿಂದ ಬೇಕಾದಷ್ಟು ತೆಗೆದುಕೊಳ್ಳಬಹುದು. ಮದರಂಗಿ ವಿನ್ಯಾಸ ಹಾಕಿಕೊಳ್ಳಬೇಕು ಎಂದೋ, ಹಚ್ಚೆ ಹಾಕಿಸಿಕೊಳ್ಳಬೇಕು ಎಂದೋ ಬಹಳ ದಿನಗಳಿಂದ ಕಾದಿದ್ದರೆ ತಳಮಹಡಿಯ್ಲ್ಲಲಿ ಅವೂ ಲಭ್ಯ. ವಿ.ವಿ. ಪುರಂ ಮತ್ತು ಅವೆನ್ಯೂ ರಸ್ತೆಯುದ್ದಕ್ಕೂ ತಿರುಗಾಡಿ ಕಾಲು ನೋಯಿಸಿಕೊಳ್ಳುವ, ಪಾರ್ಕಿಂಗ್ ಸಿಗದೆ ಪರದಾಡುವ ಕಷ್ಟವಿಲ್ಲದೆ ಒಂದೇ ಸೂರಿನಡಿ ಇಷ್ಟೊಂದು ತಿನಿಸುಗಳು, ಮನರಂಜನೆ ಪಡೆಯುವ ಅವಕಾಶ ಇಲ್ಲಿ ಸೃಷ್ಟಿಯಾದಂತಿದೆ.

ಹಾಗಿದ್ದರೆ ಜಯನಗರ ಮೂರನೇ ಬ್ಲಾಕ್ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ (ಕ್ಲೌಡ್ನೈನ್ ಮುಂಭಾಗ) ಪೈ ವೈಸ್ರಾಯ್ ಹೋಟೆಲ್ಗೆ ಭೇಟಿ ನೀಡಿ. ಆಹಾರೋತ್ಸವದಲ್ಲಿ ಏನೇ ತಿನ್ನಿ, ಎಷ್ಟೇ ತಿನ್ನಿ, ಹೊರಬರುವಾಗ ಹೂವನ್ನೂ ಪಡೆದುಕೊಳ್ಳಿ. ದೊಡ್ಡವರಿಗೆ ರೂ499, ಐದರಿಂದ ಹತ್ತು ವರ್ಷದೊಳಗಿನ ಮಕ್ಕಳಿಗೆ ರೂ 299 ಪಾವತಿಸಿದರಾಯಿತು.

ಜುಲೈ 28ಕ್ಕೆ ಆಹಾರೋತ್ಸವ ಮುಕ್ತಾಯ. ಮಧ್ಯಾಹ್ನದಿಂದ ರಾತ್ರಿವರೆಗೆ ಮಾತ್ರ. ಇನ್ನಷ್ಟು ಮಾಹಿತಿ ಬೇಕಿದ್ದರೆ ಸಂಪರ್ಕಿಸಿ: 99809 09054/2653 5400.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.