ಮಂಗಳವಾರ, ಏಪ್ರಿಲ್ 20, 2021
31 °C

ಕೈಗಾರಿಕಾ ಪ್ರಗತಿ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಈ ವರ್ಷದ ಜನವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಶೇ 3.7ರಷ್ಟಾಗಿದ್ದು, ಒಂದು ವರ್ಷದ ಹಿಂದಿನ ಶೇ 16.8ಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಕುಂಠಿತಗೊಂಡಿದೆ.ತಯಾರಿಕಾ ರಂಗ ಅದರಲ್ಲೂ ವಿಶೇಷವಾಗಿ ಭಾರಿ ಯಂತ್ರೋಪಕರಣಗಳ ತಯಾರಿಕೆಯು ಸಾಕಷ್ಟು ಪ್ರಮಾಣದಲ್ಲಿ ಕುಸಿದಿರುವುದರಿಂದ ಈ ಪ್ರಮಾಣದ ಕುಂಠಿತ ದಾಖಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ - ಜನವರಿ ತಿಂಗಳ ಕೈಗಾರಿಕಾ ಉತ್ಪಾದನೆ ಬೆಳವಣಿಗೆಯು ಶೇ 8.3ರಷ್ಟಾಗಿದೆ. ಆದರೆ, ಜನವರಿ ತಿಂಗಳಲ್ಲಿ ತಯಾರಿಕಾ ರಂಗದ ಬೆಳವಣಿಗೆಯು ಒಂದು ವರ್ಷದ ಹಿಂದಿನ ಶೇ 17.9ಕ್ಕೆ ಹೋಲಿಸಿದರೆ ಶೇ 3.7ರಷ್ಟಕ್ಕೆ ಕುಸಿದಿದೆ. ಭಾರಿ ಯಂತ್ರೋಪಕರಣಗಳ ವಲಯದ ವೃದ್ಧಿಯು ಶೇ 18.6ರಷ್ಟಾಗಿದೆ. 2010ರ ಜನವರಿ ತಿಂಗಳಲ್ಲಿ ಇದು ಶೇ 57.9ರಷ್ಟು ವೃದ್ಧಿ ದಾಖಲಿಸಿತ್ತು.ಗ್ರಾಹಕ ಬಳಕೆಯ ಹೆಚ್ಚು ಬಾಳಿಕೆ ಬರದ ವಲಯದ ಉತ್ಪಾದನೆಯು ಶೇ 6.9ರಷ್ಟಾಗಿದೆ. ಒಂದು ವರ್ಷದ ಹಿಂದೆ ಇದು ಶೇ 7ರಷ್ಟು ಕುಸಿತ ದಾಖಲಿಸಿತ್ತು. ಗಣಿಗಾರಿಕೆ ವಲಯದ ವೃದ್ಧಿಯೂ ಶೇ 1.6ರಷ್ಟು ಕಡಿಮೆಯಾಗಿದೆ. 2010ರಲ್ಲಿ ಇದು ಶೇ 15.3ರಷ್ಟಿತ್ತು. ವಿದ್ಯುತ್ ಉತ್ಪಾದನೆಯು ಕಳೆದ ವರ್ಷದ ಶೇ 5.6ಕ್ಕೆ ಹೋಲಿಸಿದರೆ ಶೇ 10.5ರಷ್ಟಾಗಿದೆ. ಒಟ್ಟಾರೆ 17 ಕೈಗಾರಿಕಾ ಸಮೂಹಗಳಲ್ಲಿ 14 ವಲಯಗಳು ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.