ಕೈಗಾರಿಕೆ ಕ್ಷೇತ್ರ ಅಲ್ಪ ಪ್ರಗತಿ

7

ಕೈಗಾರಿಕೆ ಕ್ಷೇತ್ರ ಅಲ್ಪ ಪ್ರಗತಿ

Published:
Updated:
ಕೈಗಾರಿಕೆ ಕ್ಷೇತ್ರ ಅಲ್ಪ ಪ್ರಗತಿ

ನವದೆಹಲಿ (ಪಿಟಿಐ): ಪ್ರಮುಖ ಸರಕುಗಳ ಉತ್ಪಾದನೆ ಮತ್ತು ಗಣಿ ಕ್ಷೇತ್ರದಲ್ಲಿನ ಹಿನ್ನಡೆ ಕಾರಣದಿಂದಾಗಿ ದೇಶದಲ್ಲಿನ `ಕೈಗಾರಿಕಾ ಕ್ಷೇತ್ರದ ಉತ್ಪಾದನೆ ದರಸೂಚಿ~(ಐಐಪಿ) ಮೇ ತಿಂಗಳಲ್ಲಿ ಶೇ 2.4ರ ಪ್ರಮಾಣದಲ್ಲಿದೆ. ಇದ್ದುದರಲ್ಲಿ ಏಪ್ರಿಲ್ ತಿಂಗಳಿನಲ್ಲಿದ್ದ `ಮೈನಸ್~ ಮಟ್ಟನೋಡಿದರೆ ಈಗಿನ ದರಸೂಚಿ ಮೇಲಿನದಾಗಿದೆ ಎಂಬುದೇ ಸಮಾಧಾನದ ಅಂಶ.ಇದೆಲ್ಲದರ ಮಧ್ಯೆ, ಈ `ಐಐಪಿ~ ಪ್ರಮಾಣ ನೋಡಿಯಾದರೂ ಭಾರತೀಯ ರಿಸರ್ವ್ ಬ್ಯಾಂಕ್, ಪ್ರಗತಿಯ ಗತಿ ವೇಗಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬಹುದು. ಬಡ್ಡಿದರದಲ್ಲಿ ಸ್ವಲ್ಪ ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯೂ ಉದ್ಯಮ ವಲಯದಲ್ಲಿ ಹುಟ್ಟಿಕೊಂಡಿದೆ.`ಕೈಗಾರಿಕಾ ಕ್ಷೇತ್ರದ ಉತ್ಪಾದನೆ ದರಸೂಚಿ ಬಹಳ ಕಡಿಮೆ ಇದೆ. ಆದರೆ, ಹಿಂದಿನ ತಿಂಗಳಿಗಿಂತ ಕೊಂಚ ಉತ್ತಮವಾಗಿದೆ ಎಂಬುದೇ ಸಮಾಧಾನ~ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಪ್ರತಿಕ್ರಿಯಿಸಿದ್ದಾರೆ. ಉಲ್ಲೇಖಾರ್ಹ ಅಂಶವೆಂದರೆ 2011ರ ಮೇ ತಿಂಗಳಲ್ಲಿ `ಕೈಗಾರಿಕಾ ಕ್ಷೇತ್ರದ ಉತ್ಪಾದನೆ ದರಸೂಚಿ~ ಶೇ 6.2ರಷ್ಟಿತ್ತು.`ಈಗಿನ ಐಐಪಿ ನೋಡಿದರೆ ಸುಧಾರಣೆ ಕಂಡುಬಂದಿರುವುದು ಸ್ಪಷ್ಟ.  ಈ ಬಗ್ಗೆ ಸರ್ಕಾರ ಗಮನ ಹರಿಸಲಿದೆ~ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್.ಗೋಪಾಲನ್ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry