ಶನಿವಾರ, ಜೂನ್ 12, 2021
22 °C

ಕೈಪಿಡಿ ರಚನೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಜ್ಯದ ಎಲ್ಲ ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಸಂವಿಧಾನವನ್ನು ತಿರುಚಿ ಪಾಠ ಮಾಡುತ್ತಿರುವ ಪಿ.ವಿ. ಕುಮಾರ್ ಮತ್ತು ಅವರಿಗೆ ಸಹಕರಿಸಿರುವ ಲೇಖಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಶನಿವಾರ ಧರಣಿ ನಡೆಸಿದರು.ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ಸಂವಿಧಾನ ಕುರಿತು ಪರಿಚಯಿಸುವ ಯೋಜನೆಯನ್ನು ಕೇಂದ್ರ ಸರ್ಕಾರ  ಅನುಷ್ಠಾನಗೊಳಿಸುತ್ತಿದೆ. ಅದರಡಿ ಯಲ್ಲಿ ಸಿದ್ಧಪಡಿಸಲಾಗಿರುವ ಪುಸ್ತಕ ದಲ್ಲಿ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಮಹತ್ವವನ್ನು ಪರಿಚಯಿ ಸಿಲ್ಲ. ಸಂವಿಧಾನದ ಕರಡುಪ್ರತಿಯನ್ನು ಅಂಬೇಡ್ಕರ್ ಸಿದ್ಧಪಡಿಸಿಲ್ಲ.ಬದಲಿಗೆ ಬಿ.ಎನ್‌ರಾವ್ ಸಿದ್ಧಪಡಿಸಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಸತ್ಯಗಳಿಂದ ಕೂಡಿರುವ ಪಿ.ವಿ. ಕುಮಾರ್ ರಚಿಸಿರುವ ಕೈಪಿಡಿಯನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಕೈಪಿಡಿಯನ್ನು ರಚಿಸಿರುವ ಸಮಿತಿಯ ಎಲ್ಲರ ಮೇಲೂ ಸಂವಿಧಾನ ತಿರುಚಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.ದಲಿತ ಸಂಘರ್ಷ ಸಮಿತಿಯ ಹಾರೋಹಳ್ಳಿ ರವಿ, ಬೀರಮಾನಹಳ್ಳಿ ಆಂಜಿನಪ್ಪ, ವೆಂಕಟಸ್ವಾಮಿ, ಸೀಪೂರು ದೇವರಾಜ್, ರಾಜಣ್ಣ, ಅಬ್ಬಣಿ ನಾಗರಾಜ್, ಶ್ರೀನಿವಾಸ್, ಹೂವಳ್ಳಿ ನಾಗರಾಜ್, ತ್ಯಾಗರಾಜ್ ಮುದ್ದಪ್ಪ, ವಕ್ಕಲೇರಿ ರಾಜಜಪ್ಪ, ವರದೇನಹಳ್ಳಿ ವೆಂಕಟೇಶ್,  ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಬಿ. ಸುರೇಶಗೌಡ, ಪುಟ್ಟರಾಜು, ರಾಜೇಶ್, ನಾಗೇಶ್ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.