ಭಾನುವಾರ, ಮೇ 9, 2021
28 °C

ಕೊಡಗಳನ್ನು ಇಳಿಸಮ್ಮ, ನೋಡಿದ್ದೀನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ನಿಮ್ಮೂರಿಗೆ ಬಂದ ಕೂಡಲೇ ಖಾಲಿ ಕೊಡ ಗಳನ್ನು ತೋರಿಸುತ್ತೀರಾ? ಖಾಲಿ ಕೊಡಗಳ ಸಿಂಬಾಲ್ ನನಗೂ ಗೊತ್ತು. ಸುಮ್ಮನೆ ಕೊಡ ಇಳಿಸಮ್ಮ. ನೀರಿನ ಸಮಸ್ಯೆ ಯಿದ್ದರೆ, ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ. ನನಗ್ಯಾಕೆ ಕೇಳುತ್ತೀರಾ?ನೀರಿಲ್ಲದ ಕಾರಣ ಸಮಸ್ಯೆಯನ್ನು ತೋರಪಡಿಸಲು ಖಾಲಿ ಕೊಡಗಳನ್ನು ಎತ್ತಿಕೊಂಡು ನಿಂತಿದ್ದ ಗ್ರಾಮೀಣ ಮಹಿಳೆ ಯರೊಡನೆ ಹೀಗೆ ಮಾತನಾಡಿದವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್. ತಾಲ್ಲೂಕಿನ ಮಂಡಿಕಲ್ ಸಮೀಪದ ಪಯ್ಯೂರ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಹೇಳಲೆತ್ನಿಸಿದಾಗ, ಪರಮೇಶ್ವರ್ ಈ ರೀತಿಯ ಉತ್ತರ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.