ಶುಕ್ರವಾರ, ಜೂನ್ 25, 2021
24 °C

ಕೊಡಚಾದ್ರಿ ಮಹಿಳಾ ಬ್ಯಾಂಕ್‌ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೊಡಚಾದ್ರಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್‌ ತೀರ್ಥಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರ ಪದಾಧಿಕಾರಿಗಳ ಆಯ್ಕೆ ಈಚೆಗೆ ನಡೆಯಿತು.ಬ್ಯಾಂಕ್‌ನ ಅಧ್ಯಕ್ಷೆಯಾಗಿ ಸುಷ್ಮಾ ಸಂಜಯ್‌, ಉಪಾಧಕ್ಷೆಯಾಗಿ ಫರ್ಜಾನ ಖಾನಂ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸೌಹಾರ್ದ ಪತ್ತಿನ ಸಹಕಾರಿ ಕಾಯ್ದೆ ಅಡಿ ನೋಂದಣಿಗೊಳ್ಳುವ ಈ ಬ್ಯಾಂಕ್‌ನ ಮುಖ್ಯ ಉದ್ದೇಶ ವಿವಿಧ ರೀತಿಯ ಕೃಷಿಯೇತರ ಅಲ್ಪಾವಧಿ, ಮಧ್ಯಮಾ ವಧಿ, ಸ್ವ–ಸಹಾಯ ಗುಂಪುಗಾರಿಕೆ ಹಾಗೂ ದೀರ್ಘಾವಧಿ ಸಾಲಗಳನ್ನು ಮಹಿಳಾ ಸದಸ್ಯರಿಗೆ ಒದಗಿಸುವುದಾಗಿದೆ ಎಂದರು.ಸದಸ್ಯರಿಂದ ಠೇವಣಿ ಸಂಗ್ರಹಿಸಿ ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಮತ್ತು ಉಪಕಸಬುಗಳಿಗೆ ಹಾಗೂ ವಿವಿಧ ರೀತಿಯ ಉದ್ದೇಶಗಳಿಗಾಗಿ ಸಾಲ–ಸೌಲಭ್ಯವನ್ನು ನೀಡುವುದು ಮುಂತಾದ 34 ವಿವಿಧ ಉದ್ದೇಶ ಗಳನ್ನು ಒಳಗೊಂಡಿದೆ ಎಂದು ವಿವರಣೆ ನೀಡಿದರು.ಒಂದೇ ವಾರದಲ್ಲಿ 2,600 ಸದಸ್ಯರಿಂದ ₨50ಲಕ್ಷ ಷೇರನ್ನು ಸಂಗ್ರಹಿಸಲಾಗಿದೆ. ಈ ತಿಂಗಳ ಅಂತ್ಯದ ಒಳಗೆ 10ಸಾವಿರ ಸದಸ್ಯರನ್ನು ಮಾಡಿ ₨1ಕೋಟಿ ಷೇರು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.ಬ್ಯಾಂಕಿನ ಅಧ್ಯಕ್ಷೆ ಸುಷ್ಮಾ ಸಂಜಯ್‌ ಮಾತನಾಡಿ, ಸಾಲ ನೀಡುವುದಷ್ಟೇ ಬ್ಯಾಂಕ್ ಕೆಲಸ ಅಲ್ಲ; ಹೊಸ ಉದ್ದಿಮೆ ಸ್ಥಾಪಿಸುವ ಮಹಿಳೆಯರಿಗೆ ಸಲಹೆ–ಮಾರ್ಗದರ್ಶನ ಮತ್ತು ಸಮಾಜದ ಆರ್ಥಿಕ –ಸಾಮಾಜಿಕ ಚಟುವಟಿ ಕೆಗಳಲ್ಲಿ ಭಾಗಿಯಾಗಲಿದೆ

ಎಂದು ವಿವರಣೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಸುಮಾ ಸುಬ್ರಹ್ಮಣ್ಯ, ರೇಣುಕಾ ಚಂದ್ರಪ್ಪ, ನಿರ್ಮಲಾ ರಾಜು, ವಿನೋದಾ ಕೃಷ್ಣಮೂರ್ತಿ, ಆರ್‌.ಡಾ ಕಮ್ಮ, ಅಚಲ ಎಸ್‌.ಹೆಗ್ಡೆ, ಚೇತನಾ ಶ್ರೀಕಾಂತ್, ಶಶಿಕಲಾ ಮಂಜುನಾಥಶೆಟ್ಟಿ, ಪುಷ್ಪಲತಾ ವೆಂಕಟೇಶ್‌

ಮತ್ತಿತರರು ಉಪಸ್ಥಿತರಿದ್ದರು.ಏ.21ರಿಂದ ಪ್ರಕೃತಿ ಅಧ್ಯಯನ ಶಿಬಿರ

ಶಿವಮೊಗ್ಗ: ಯೂತ್ ಹಾಸ್ಟೆಲ್ ಅಸೋಷಿಯೇನ್ ಆಫ್ ಇಂಡಿಯಾ ತರುಣೋದಯ ಘಟಕ, ಏಪ್ರಿಲ್ 21ರಿಂದ ಮೇ 26-ರವರೆಗೆ ಹಿಮಾಲಯ ಪರ್ವತದ ಕುಲು ಮನಾಲಿಯ ಸುತ್ತಮುತ್ತ 10-ರಿಂದ 15 ವರ್ಷ ಒಳಗಿನ ಮಕ್ಕಳಿಗೆ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಚಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಆಸಕ್ತರು ಡಾ.ಶೇಖರ್ ಗೌಳೇರ ಅವರ ಮೊಬೈಲ್: 98801 62132 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.