ಶನಿವಾರ, ಜನವರಿ 18, 2020
21 °C

ಕೊತ್ತಿಪುರ: ಹುಚ್ಚುನಾಯಿ ಕೊಂದ ಸಾರ್ವಜನಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊತ್ತಿಪುರ: ಹುಚ್ಚುನಾಯಿ ಕೊಂದ ಸಾರ್ವಜನಿಕರು

ರಾಮನಗರ: ವಿದ್ಯಾರ್ಥಿಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದ ಹುಚ್ಚು ನಾಯಿಯನ್ನು ಸಾರ್ವಜನಿಕರು ಸಾಯಿ ಸಿರುವ ಘಟನೆ ಕೊತ್ತಿಪುರದಲ್ಲಿ ನಡೆ ದಿದೆ. ಏತನ್ಮಧ್ಯೆ ನಗರದಲ್ಲಿ ನಾಯಿ ಹಾವಳಿಯನ್ನು ನಿಯಂತ್ರಿಸದ ನಗರ ಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಯಿಗಳ ಕಾಟದಿಂದ ಮಕ್ಕಳು ಓಡಾಡುವುದು ಕಷ್ಟವಾಗಿದೆ. ಹೊರಗೆ ಹೋದ ಮಕ್ಕಳು ಮತ್ತೆ ಮನೆಗೆ ಸುರಕ್ಷಿತವಾಗಿ ವಾಪಸ್ ಬರಲಿವೆ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಆದ್ದರಿಂದ ನಾಯಿಗಳ ನಿಯಂತ್ರಣಕ್ಕೆ ನಗರಸಭೆ ಕೂಡಲೇ ಕ್ರಮ ಕೈಗೊಳ್ಳ ಬೇಕು ಎಂದು ಕೊತ್ತಿಪುರ ನಿವಾಸಿ ಶ್ರೀನಿವಾಸ್ ಅವರು ಆಗ್ರಹಿಸಿದ್ದಾರೆ.ಕಳೆದ ಶನಿವಾರ (ಡಿ.14) ಇಲ್ಲಿನ ಹಿರಿಯ ಪ್ರಾಥಮಿಕ ಪಾಠ ಶಾಲೆ ಬಳಿ ಆಟವಾಡುತ್ತಿದ್ದ ಒಂದನೇ ತರಗತಿ ವಿದ್ಯಾರ್ಥಿನಿ ಗಿರಿಜಾ (6) ಹಾಗೂ ಎರಡನೇ ತರಗತಿ ವಿದ್ಯಾರ್ಥಿ ರಾಜು (7) ಎಂಬ ವಿದ್ಯಾರ್ಥಿಗಳ ಮೇಲೆ ಈ ಹುಚ್ಚು ನಾಯಿ ಎರಗಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿತ್ತು.ಮೊದಲು ರಾಜುವಿನ ಮೇಲೆ ಎರಗಿದ ನಾಯಿ ಆತನ ಬಲ ತೋಳಿನ ಮಾಂಸ ಕಿತ್ತು ಬರುವಂತೆ ಕಚ್ಚಿತ್ತು. ನಂತರ ಗಿರಿಜಾಳ ಮೇಲೂ ದಾಳಿ ನಡೆಸಿದ್ದ ಈ ನಾಯಿ, ಆಕೆಯ ಕೆನ್ನೆಯನ್ನು ಕಚ್ಚಿತ್ತು. ನಾಯಿ ಕಡಿತ ದಿಂದ ಗಾಯಗೊಂಡ ಮಕ್ಕಳನ್ನು ನಗರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊತ್ಯಲಾಯಿತು. ಆದರೆ ಚಿಕಿತ್ಸೆ ಲಭ್ಯವಾಗಲಿಲ್ಲ.ನಂತರ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜುಗೆ ಕಿಮ್ಸ್ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಕೊಡಿಸಲಾಗಿದೆ.

ಪ್ರತಿಕ್ರಿಯಿಸಿ (+)