ಸೋಮವಾರ, ಮೇ 10, 2021
22 °C

ಕೊಪ್ಪಳ: ಐವರಿಂದ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಗಂಗಾವತಿಯ ಬಸಪ್ಪ ಶಂಕರಪ್ಪ, ಭಾಗ್ಯನಗರದ ವಿಠ್ಠಪ್ಪ ಗೋರಂಟ್ಲಿ, ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಎಚ್.ಎಂ.ಎಹೆಸಾನುಲ್ಲ ಪಟೇಲ್, ಕುಷ್ಟಗಿ ತಾಲ್ಲೂಕು ನಂದಾಪುರದ ಯಮನೂರಪ್ಪ ಮರಿಯಪ್ಪ ನಾಮಪತ್ರ ಸಲ್ಲಿಸಿದರು.ಬೀದರ್‌ನ ಜಮಿರೋದ್ದೀನ್ ಹಮಿರೋದ್ದಿನ್ ಮೌಲ್ವಿ  ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.ಇದುವರೆಗೆ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ ಎಂದು ಚುನಾವಣಾಧಿಕಾರಿ ಎಂ. ಶರಣಬಸಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.