ಕೊಪ್ಪ: ತಾಲ್ಲೂಕಿನ ಮಾವಿನಕಟ್ಟೆ-ಕಮ್ಮರಡಿ ಎಂಟು ಕಿಲೋಮೀಟರ್ ರಸ್ತೆ ತೀವ್ರ ಹದಗೆಟ್ಟಿದ್ದು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ರೈತ ಸಂಘ , ಹಸಿರುಸೇನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾನುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಶೃಂಗೇರಿ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಗಡಿಭಾಗದಲ್ಲಿರುವ ಈ ರಸ್ತೆಯ ಅಭಿವೃದ್ಧಿಗೆ ಎರಡೂ ಕ್ಷೇತ್ರಗಳ ಶಾಸಕರು ಆಸಕ್ತಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

ಮಳಲೂರು, ಕಂಚಿನಕೆರೆ, ಅಗಲಿ, ಹೊನಗಾರು, ಶಂಕರಪುರ, ಕೊಡೂರು, ಹೆಗ್ಗದ್ದೆ, ಶಾನುವಳ್ಳಿ ಮೊದಲಾದ ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಯ ದುರವಸ್ಥೆ ಗಮನಿಸುವವರೇ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ರಸ್ತೆಯ ಗುಂಡಿಗಳಿಗೆ ಗಿಡ ನೆಟ್ಟು ಎರಡು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ಮಾಡಿದರು.

ರೈತ ಸಂಘದ ಕರುವಾನೆ ನವೀನ್, ಬೆಳಗುಳ ಚಿಂತನ್, ಕುಪ್ಪಳಿ ಸುಧಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶೋಭಿಂತ್, ಗ್ರಾಮಸ್ಥರಾದ ಅಗಲಿ ನಾಗೇಶ್ ರಾವ್, ನಾಗರಾಜ್, ರಾಮಚಂದ್ರ, ಎಂ.ಕೆ.ಸತೀಶ್, ನವೀನ್, ಕೀರ್ತನ್, ಗ್ರಾ.ಪಂ. ಸದಸ್ಯೆ ಸರಸ್ವತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಲಕ್ಷ್ಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.