ಶುಕ್ರವಾರ, ಮೇ 20, 2022
21 °C

ಕೊಯಮತ್ತೂರಿನಲ್ಲಿ ಪ್ರಾವಿಡೆಂಟ್ ಗ್ರೀನ್‌ಪಾರ್ಕ್ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ಪುರವಂಕರ ಪ್ರಾಜೆಕ್ಟ್ಸ್ ಅಂಗಸಂಸ್ಥೆ ಪ್ರಾವಿಡೆಂಟ್ ಹೌಸಿಂಗ್ ಲಿ, ಕೊಯಮತ್ತೂರು ಬಳಿ ಸೆಲ್ವಪುರಂನಲ್ಲಿ 9 ಎಕರೆಯಲ್ಲಿ 560 ಮನೆಗಳ `ಪ್ರಾವಿಡೆಂಟ್ ಗ್ರೀನ್‌ಪಾರ್ಕ್' ವಸತಿ ಸಂಕೀರ್ಣ ನಿರ್ಮಾಣ ಯೋಜನೆ ಪ್ರಕಟಿಸಿದೆ.ಬೆಂಗಳೂರು, ಚೆನ್ನೈನಲ್ಲಿ `ಪ್ರಾವಿಡೆಂಟ್'ನ ಕೈಗೆಟಕುವ ದರದ ಮೇಲ್ದರ್ಜೆ ವಸತಿ ಸಂಕೀರ್ಣ ನಿರ್ಮಿಸಿದ ನಂತರ ಕೊಯಮತ್ತೂರಿಗೆ ಯೋಜನೆ ವಿಸ್ತರಿಸಲಾಗಿದೆ. 542 ಚದರಡಿ ವಿಸ್ತಾರದ 1 ಕೊಠಡಿ ಮನೆ ರೂ17.29 ಲಕ್ಷ, 886 ಚದರಡಿಯ, 2 ಕೊಠಡಿ ಮನೆ ರೂ28.87 ಲಕ್ಷ ಮತ್ತು 1208 ಚದರಡಿ ವಿಸ್ತೀರ್ಣದ 3 ಕೊಠಡಿಗಳ ಮನೆ ರೂ 38.82 ಲಕ್ಷದಿಂದ ಆರಂಭ ಎಂದು ಪುರವಂಕರ ಸಮೂಹ `ಸಿಇಒ' ಜಾಕ್‌ಬಾಸ್ಟಿನ್ ಕೆ.ನಝರೆತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.