ಶನಿವಾರ, ಜನವರಿ 18, 2020
19 °C

ಕೊಲೆ ಆರೋಪ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್): ಅಪರಾಧ ತನಿಖಾಧಿಕಾರಿಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ರಷ್ಯಾದ ಮೇಯರ್ ಒಬ್ಬರನ್ನು ಭಾನುವಾರ ಬಂಧಿಸಲಾಗಿದೆ.ದಗೆಸ್ತಾನ್ ರಿಪಬ್ಲಿಕ್‌ನ ರಾಜಧಾನಿ ಮಕಾಚಕ್ಲಾದ ಮೇಯರ್ ಸೆಡ್ ಅಮಿರೊ ಬಂಧಿತರು.ಆರೋಪಿ ಮೇಯರ್ 2011ರಲ್ಲಿ ಅಪರಾಧ ತನಿಖಾಧಿಕಾರಿ ಆರ್ಸೆನ್ ಗಡ್ಜಿಬೆಕೊವ್ ಅವರ ಕೊಲೆಗೆ ಸಂಚು ರೂಪಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ 10 ಶಂಕಿತರನ್ನು ಬಂಧಿಸಲಾಗಿದೆ ಎಂದು  ತನಿಖಾ ಸಮಿತಿ ವಕ್ತಾರ ವ್ಲಾಡಿಮೀರ್ ಮಾರ್ಕಿನ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)