ಶುಕ್ರವಾರ, ಮೇ 14, 2021
31 °C

ಕೊಳವೆಬಾವಿ ನೀರು ಯೋಗ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹಿಸಿ ಬಳಸುವ ಕುರಿತಂತೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರಿಗಳನ್ನು ಕಳು ಹಿಸಿ ವರದಿಯೊಂದನ್ನು ತಯಾರಿಸಿದ್ದರು. ಅವರ ಅಧಿಕಾರಾವಧಿ ಮುಗಿದಿದ್ದರಿಂದ ಅನುಷ್ಠಾನ ಗೊಳಿಸಲು ಆಗಲಿಲ್ಲ. ತಮಿಳುನಾಡಿನ ಜನರು ಮನೆಗಳ ಮೇಲೆ ಬಿದ್ದ ನೀರನ್ನು  ಒಂದು ತೊಟ್ಟಿಯಲ್ಲಿ ಸಂಗ್ರಹಿಸಿ ಬಳಸುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಋತುಮಾನದ ವೈಪರೀತ್ಯಗಳಿಂದ ಮಳೆ ಏರುಪೇರಾಗಿದೆ. ಪದೇ ಪದೇ ಬರಗಾಲ ಬರುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಈಗ ಕೊಳವೆ ಬಾವಿ ನೀರು ಸುರಕ್ಷಿತ ಅಲ್ಲ.ರಾಮ ನಗರದಲ್ಲಿ ಈ ವರ್ಷ 30ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ.  ಹಳ್ಳಿಗಳಲ್ಲೂ ಸಾಕಷ್ಟು ಬಾವಿಗಳನ್ನು ಕೊರೆಸಲಾಗಿದೆ. ಅವುಗಳ ನೀರು ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿ ಸದೆ ಜನರಿಗೆ ಬಳಸಲು ಅವಕಾಶ ಕೊಡಬಾರದು. ನಗರ ಸಭೆ, ಆರೋಗ್ಯ ಇಲಾಖೆಗಳು ಈ ಕುರಿತು ಜನರಿಗೆ ತಿಳುವಳಿಕೆ ನೀಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.