ಭಾನುವಾರ, ನವೆಂಬರ್ 17, 2019
29 °C

ಕೋಲ್ಕತ್ತ ಬೀದಿಗಳಲ್ಲಿ ಸಂಭ್ರಮ

Published:
Updated:

ಕೋಲ್ಕತ್ತ (ಐಎಎನ್‌ಎಸ್): ದೇಶದ ಪ್ರಥಮ ಪ್ರಜೆ ಹಾಗೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಮೊದಲ ಬಂಗಾಲಿ ಕೀರ್ತಿಗೆ ಪಾತ್ರರಾದ ಪ್ರಣವ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಲೇ ಕೋಲ್ಕತ್ತದ  ಹಾದಿಬೀದಿಗಳಲ್ಲಿ ಸಂಭ್ರಮವೊ ಸಂಭ್ರಮ. ಪಂಚತಾರಾ ಹೋಟೆಲ್‌ನಿಂದ ಹಿಡಿದು ಬೀದಿಗಳಲ್ಲೆಲ್ಲ ಭಾನುವಾರ `ಟೀ ಪಾರ್ಟಿ~ಯ ವಿಜಯೋತ್ಸವ ಕಂಡುಬಂತು.ಪಟಾಕಿ, ಬಣ್ಣದ ಗುಲಾಲು ಸಂಭ್ರಮದಲ್ಲಿದ್ದ ನೂರಾರು ಜನ ಮೆರವಣಿಯುದ್ದಕ್ಕೂ ನೃತ್ಯದಲ್ಲಿ ತೊಡಗಿದ್ದರು. ರಾಜ್ಯ ಕಾಂಗ್ರೆಸ್ ಕೇಂದ್ರ ಕಚೇರಿ ಇರುವ ವಿಧಾನ ಭವನದಲ್ಲಿ ಬಂಗಾಳದ ಜನಪ್ರಿಯ ಸಿಹಿ `ಸಂದೇಶ~ ಅನ್ನು ಹಂಚಿ ಸಂಭ್ರಮಿಸಲಾಯಿತು. `ಈ ದಿನ ನಮಗೆಲ್ಲ ಐತಿಹಾಸಿಕ~ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ ಭಟ್ಟಾಚಾರ್ಯ ಹೇಳಿದರು.ಕೆಲ ಕಾಂಗ್ರೆಸ್ ಮುಖಂಡರು ಪಂಚತಾರಾ ಹೋಟೆಲ್‌ಗಳಲ್ಲಿ ಚಹಾಕೂಟ ಏರ್ಪಡಿಸಿದ್ದರು. ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಮಿತ್ರಪಕ್ಷ ತೃಣಮೂಲ ಕಾಂಗ್ರೆಸ್ ನಾಯಕರಿಗೂ ತಿಳಿಸಲಾಗಿತ್ತಾದರೂ ಅವರ ಉಪಸ್ಥಿತಿ ಕಂಡುಬರಲಿಲ್ಲ.

ಪ್ರತಿಕ್ರಿಯಿಸಿ (+)