ಶುಕ್ರವಾರ, ಮೇ 27, 2022
27 °C

ಕೌಂಟರ್ ಮೀಡಿಯಾ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರನ್ನು ಗುರುತಿಸಲು `ಕೌಂಟರ್ ಮೀಡಿಯಾ~ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪತ್ರಕರ್ತ ಪಿ.ಸಾಯಿನಾಥ್ ಅವರು `ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್~ ಪುಸ್ತಕದ ಸಂಭಾವನೆಯ ಹಣದಿಂದ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.ಗ್ರಾಮೀಣ ಅಭಿವೃದ್ಧಿ, ಬಡತನ, ಹಸಿವಿನ ಬಗ್ಗೆ ಬರೆದು ಸಾಮಾಜಿಕ ಉನ್ನತಿಗೆ ಶ್ರಮಿಸಿದ ಇಬ್ಬರು ಪತ್ರಕರ್ತರಿಗೆ ಈ ಪ್ರಶಸ್ತಿ ನೀಡಲಾಗುವುದು.ಕರ್ನಾಟಕ ರಾಜ್ಯದ ಯಾವುದೇ ಭಾಗದಿಂದ, ಯಾವುದೇ ಭಾರತೀಯ ಭಾಷೆಯಲ್ಲಿ ಬರೆಯುವ 35 ವರ್ಷದೊಳಗಿನ ಪತ್ರಕರ್ತರು ತಮ್ಮ ಉತ್ತಮ ಅಭಿವೃದ್ಧಿ ಬರಹಗಳನ್ನು ಪ್ರಶಸ್ತಿಗಾಗಿ ಸಲ್ಲಿಸಬಹುದು.ಒಂದು ಬಹುಮಾನ ಪತ್ರಕರ್ತೆಯರಿಗೆ ಮೀಸಲಾಗಿರುತ್ತದೆ.

ಪತ್ರಕರ್ತರು ತಮ್ಮ ಸ್ವ ವಿವರಗಳನ್ನು ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ವಿವರಿಸುವ ಕಿರು ಬರಹವನ್ನು ಲೇಖನಗಳೊಂದಿಗೆ ಕಳುಹಿಸಬೇಕು.ವಿದ್ಯುನ್ಮಾನ ಮಾಧ್ಯಮದವರು ತಮ್ಮ ವರದಿ ಪ್ರಸಾರವಾಗಿರುವ ಸಿಡಿ ಅಥವಾ ಡಿವಿಡಿಯನ್ನು ಅರ್ಜಿಯೊಂದಿಗೆ ಕಳುಹಿಸಬೇಕು.ಪ್ರಶಸ್ತಿಯು 25,000 ರೂಪಾಯಿ ಮತ್ತು ಒಂದು ಡಿಜಿಟಲ್ ಕ್ಯಾಮೆರಾವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಲೇಖನ ಅಥವಾ ವರದಿಗಳನ್ನು countermediaawards@gmail.com ಗೆ ಅಥವಾ ಕೌಂಟರ್ ಮೀಡಿಯಾ ಅವಾರ್ಡ್ಸ್, ನಂ.142, 69 ನೇ ಅಡ್ಡರಸ್ತೆ, ರಾಜಾಜಿನಗರ 5 ನೇ ಬ್ಲಾಕ್ ಇಲ್ಲಿಗೆ ಸಲ್ಲಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.