ನವದೆಹಲಿ (ಪಿಟಿಐ/ಐಎಎನ್ಎಸ್): ‘ಪಶ್ಚಿಮ ಆಫ್ರಿಕಾದ ಟೋಗೊ ದೇಶದಲ್ಲಿ ಜುಲೈ ತಿಂಗಳಿನಿಂದ ಬಂಧಿತರಾಗಿದ್ದ ಭಾರತದ ಸರಕು ಸಾಗಣೆ ಹಡಗಿನ ಕ್ಯಾಪ್ಟನ್ ಸುನೀಲ್ ಜೇಮ್ಸ್ ಬಿಡುಗಡೆಯಾಗಿದ್ದಾರೆ’ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತಿಳಿಸಿದೆ.

ಇವರ ಜತೆಗೆ ಭಾರತದ ಮತ್ತೊಬ್ಬ ಕ್ಯಾಪ್ಟನ್ ವಿಜಯನ್ ಅವರನ್ನೂ ಬಿಡುಗಡೆ ಮಾಡಲಾಗಿದೆ. ಇವರಿಬ್ಬರು ಶುಕ್ರವಾರ ಭಾರತಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಜುಲೈ 31ರಂದು ಸುನೀಲ್ ಜೇಮ್ಸ್ ಅವರಿದ್ದ ಹಡಗಿನ (ಎಂಟಿ ಓಷನ್ ಸೆಂಚುರಿಯನ್) ಮೇಲೆ ಕಡಲ್ಗಳ್ಳರು ಆಕ್ರಮಣ ಮಾಡಿದ್ದರು. ಕಡಲ್ಗಳ್ಳರಿಗೆ ನೆರವು ನೀಡಿದ ಆರೋಪದ ಮೇಲೆ ಸುನೀಲ್ ಹಾಗೂ ಇನ್ನಿಬ್ಬರು ಸಿಬ್ಬಂದಿಯನ್ನು ಟೋಗೊದಲ್ಲಿ ಬಂಧಿಸಲಾಗಿತ್ತು.

ಈ ನಡುವೆ ಡಿಸೆಂಬರ್ ಎರಡರಂದು ಸುನೀಲ್ ಅವರ 11 ತಿಂಗಳ ಗಂಡು ಮಗು ಸೆಪ್ಟಿಸೀಮಿಯಾ (ರಕ್ತನಂಜು)ದಿಂದ ಆಸ್ಪತ್ರೆಯಲ್ಲಿ ಅಸುನೀಗಿತ್ತು. ಮಗುವಿನ ಅಂತ್ಯಕ್ರಿಯೆ ನೆರವೇರಿಸಲು ಸುನೀಲ್ ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಪತ್ನಿ ಅದಿತಿ, ಕುಟುಂಬದವರು ಕೇಳಿಕೊಂಡಿದ್ದರು. ಈ ಸಂಬಂಧ, ಅಕ್ರಾದಲ್ಲಿರುವ ಭಾರತದ ಅಧಿಕಾರಿಗಳು ಟೋಗೊ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅಲ್ಲದೇ ಸುನೀಲ್ ಅವರನ್ನೂ ಭೇಟಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.