ಹವಾನಾ (ಎಪಿ): ತಮ್ಮ 90ನೇ ಜನ್ಮದಿನದಂದು ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಕ್ಯೂಬಾದ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಕ್ಯಾಸ್ಟ್ರೊ ಅವರು ಒಬಾಮ ಅವರನ್ನು ಟೀಕಿಸಿರುವ ಸುದೀರ್ಘ ಪತ್ರವು ಅಲ್ಲಿನ ಸರ್ಕಾರಿ ಮಾಧ್ಯಮದಲ್ಲಿ ಪ್ರಕಟವಾಗಿದೆ.

ಎರಡನೇ ಜಾಗತಿಕ ಯುದ್ಧದ ವೇಳೆ ಹಿರೋಶಿಮಾ ಮೇಲಿನ ಅಣುಬಾಂಬ್ ದಾಳಿಗೆ ಜಪಾನಿಗರ ಕ್ಷಮೆ ಕೋರದ ಒಬಾಮ ಅವರ ಧೋರಣೆಗೆ ಕ್ಯಾಸ್ಟ್ರೊ ಆಕ್ಷೇಪಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಜನರು ತೋರಿಸುತ್ತಿರುವ ಗೌರವ, ಶುಭ ಹಾರೈಕೆ ಮತ್ತು ಪ್ರಶಂಸೆಗಳಿಗೆ ತುಂಬಾ ಆಭಾರಿಯಾಗಿದ್ದೇನೆ. ಇವು ನನ್ನಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಂಡು, ಅವುಗಳನ್ನು ಸೇನೆ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಶಕ್ತಿ ನೀಡುತ್ತಿವೆ’ ಎಂದು ಕ್ಯಾಸ್ಟ್ರೊ ಅವರು ಪತ್ರದಲ್ಲಿ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

90ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂತೋಷಕೂಟದಲ್ಲಿ ಕ್ಯಾಸ್ಟ್ರೊ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರ ಸಹೋದರ, ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೊ. ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.