ಭಾನುವಾರ, ಏಪ್ರಿಲ್ 18, 2021
30 °C

ಕ್ರಿಕೆಟ್‌: ಭಾರತಕ್ಕೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌: ಭಾರತಕ್ಕೆ ಚಿನ್ನ

ಪಳ್ಳೆಕೆಲೆ (ಪಿಟಿಐ): ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 20 ರನ್‌ಗಳಿಂದ ಮಣಿಸಿದ ಭಾರತ ಸರಣಿಯನ್ನು 4-1 ರಲ್ಲಿ ಗೆದ್ದುಕೊಂಡಿತು.



ಪಳ್ಳೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 294 ರನ್ ಪೇರಿಸಿದರೆ, ಲಂಕಾ 45.4 ಓವರ್‌ಗಳಲ್ಲಿ 274 ರನ್‌ಗಳಿಗೆ ಆಲೌಟಾಯಿತು.



ಇರ್ಫಾನ್ ಪಠಾಣ್ (61ಕ್ಕೆ 5) ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಲಾಹಿರು ತಿರಿಮನ್ನೆ (77) ಮತ್ತು ಜೀವನ್ ಮೆಂಡಿಸ್ (72) ಅವರು ನಡೆಸಿದ ಹೋರಾಟಕ್ಕೆ ತಕ್ಕ ಫಲ ಲಭಿಸಲಿಲ್ಲ. ಸರಣಿ ಜಯಿಸಿದ ಕಾರಣ ಭಾರತ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.



ಮೊದಲು ಬ್ಯಾಟ್ ಮಾಡಿದ ಭಾರತ ಸವಾಲಿನ ಮೊತ್ತ ಪೇರಿಸಿತು. ಗೌತಮ್ ಗಂಭೀರ್ (88, 99 ಎಸೆತ, 7 ಬೌಂ), ಮನೋಜ್ ತಿವಾರಿ (65, 68 ಎಸೆತ, 6 ಬೌಂ) ಮತ್ತು ಮಹೇಂದ್ರ ಸಿಂಗ್ ದೋನಿ (58, 38 ಎಸೆತ, 8 ಬೌಂ, 1 ಸಿಕ್ಸರ್) ಅರ್ಧಶತಕ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು.



ಗಂಭೀರ್ ಮತ್ತು ತಿವಾರಿ ನಾಲ್ಕನೇ ವಿಕೆಟ್‌ಗೆ 110 ರನ್ ಸೇರಿಸಿದರೆ, ದೋನಿ ಹಾಗೂ ಪಠಾಣ್ ಏಳನೇ ವಿಕೆಟ್‌ಗೆ 9.5 ಓವರ್‌ಗಳಲ್ಲಿ 77 ರನ್ ಕಲೆಹಾಕಿದರು. ಅಜೇಯ 29 ರನ್ ಗಳಿಸಿದ ಪಠಾಣ್ ಆಲ್‌ರೌಂಡ್ ಪ್ರದರ್ಶನ ನೀಡಿದರು.



ಸ್ಕೋರ್ ವಿವರ:

ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 294

ಗೌತಮ್ ಗಂಭೀರ್ ಸಿ ಮಾಲಿಂಗ ಬಿ ಸಚಿತ್ರ ಸೇನನಾಯಕೆ  88

ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ತಿಸಾರ ಪೆರೇರಾ  09

ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ನುವಾನ್ ಪ್ರದೀಪ್  23

ರೋಹಿತ್ ಶರ್ಮ ಬಿ ನುವಾನ್ ಪ್ರದೀಪ್  04

ಮನೋಜ್ ತಿವಾರಿ ಪೆರೇರಾ ಬಿ ಲಸಿತ್ ಮಾಲಿಂಗ  65

ಸುರೇಶ್ ರೈನಾ ಸಿ ತಿರಿಮನ್ನೆ ಬಿ ಲಸಿತ್ ಮಾಲಿಂಗ  00

ಮಹೇಂದ್ರ ಸಿಂಗ್ ದೋನಿ ಸಿ ಚಂಡಿಮಾಲ ಬಿ ಲಸಿತ್ ಮಾಲಿಂಗ 58

ಇರ್ಫಾನ್ ಪಠಾಣ್ ಔಟಾಗದೆ  29

ಆರ್. ಅಶ್ವಿನ್ ಔಟಾಗದೆ  02

ಇತರೆ: (ಲೆಗ್‌ಬೈ-10, ವೈಡ್-6)  16



ವಿಕೆಟ್ ಪತನ: 1-29 (ರಹಾನೆ; 5.1), 2-77 (ಕೊಹ್ಲಿ; 14.3), 3-47 (ರೋಹಿತ್; 16.6), 4-197 (ತಿವಾರಿ; 37.1), 5-197 (ರೈನಾ; 37.2), 6-213 (ಗಂಭೀರ್; 38.6), 7-290 (ದೋನಿ; 48.5)

ಬೌಲಿಂಗ್: ಲಸಿತ್ ಮಾಲಿಂಗ 10-0-64-3, ತಿಸಾರ ಪೆರೇರಾ 10-0-53-1, ಏಂಜೆಲೊ ಮ್ಯಾಥ್ಯೂಸ್ 5-0-29-0, ನುವಾನ್ ಪ್ರದೀಪ್ 10-0-63-2, ಸಚಿತ್ರ ಸೇನನಾಯಕೆ 10-0-50-1, ಜೀವನ್ ಮೆಂಡಿಸ್ 5-0-25-0

ಶ್ರೀಲಂಕಾ: 45.4 ಓವರ್‌ಗಳಲ್ಲಿ 274

ಉಪುಲ್ ತರಂಗ ಸಿ ರಹಾನೆ ಬಿ ಇರ್ಫಾನ್ ಪಠಾಣ್  31

ತಿಲಕರತ್ನೆ ದಿಲ್ಶಾನ್ ಸಿ ಜಹೀರ್ ಬಿ ಇರ್ಫಾನ್ ಪಠಾಣ್  00

ಲಾಹಿರು ತಿರಿಮನ್ನೆ ರನೌಟ್  77

ದಿನೇಶ್ ಚಂಡಿಮಾಲ ಎಲ್‌ಬಿಡಬ್ಲ್ಯು ಬಿ ಅಶೋಕ್ ದಿಂಡಾ  08

ಏಂಜೆಲೊ ಮ್ಯಾಥ್ಯೂಸ್ ರನೌಟ್  13

ಚಾಮರ ಕಪುಗೆಡರ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್  09

ಜೀವನ್ ಮೆಂಡಿಸ್ ಸಿ ದೋನಿ ಬಿ ಇರ್ಫಾನ್ ಪಠಾಣ್  72

ತಿಸಾರ ಪೆರೇರಾ ಸಿ ಕೊಹ್ಲಿ ಬಿ ಇರ್ಫಾನ್ ಪಠಾಣ್  18

ಸಚಿತ್ರ ಸೇನನಾಯಕೆ ಬಿ ಇರ್ಫಾನ್ ಪಠಾಣ್  07

ಲಸಿತ್ ಮಾಲಿಂಗ ಸಿ ರೈನಾ ಅಶೋಕ್ ದಿಂಡಾ  10

ನುವಾನ್ ಪ್ರದೀಪ್ ಔಟಾಗದೆ  00

ಇತರೆ: (ಬೈ-2, ಲೆಗ್‌ಬೈ-14, ವೈಡ್-13)  29

ವಿಕೆಟ್ ಪತನ: 1-13 (ದಿಲ್ಶಾನ್; 1.3), 2-61 (ತರಂಗ; 7.5), 3-74 (ಚಂಡಿಮಾಲ; 10.1), 4-89 (ಮ್ಯಾಥ್ಯೂಸ್; 13.2), 5-102 (ಕಪುಗೆಡರ; 15.1), 6-204 (ತಿರಿಮನ್ನೆ; 35.5), 7-252 (ಪೆರೇರಾ; 42.3), 8-256 (ಮೆಂಡಿಸ್; 42.6), 9-266 (ಸೇನನಾಯಕೆ; 44.6), 10-274 (ಮಾಲಿಂಗ; 45.4)

ಬೌಲಿಂಗ್: ಜಹೀರ್ ಖಾನ್ 9-1-53-1, ಇರ್ಫಾನ್ ಪಠಾಣ್ 10-0-61-5, ಅಶೋಕ್ ದಿಂಡಾ 7.4-0-55-2, ವಿರಾಟ್ ಕೊಹ್ಲಿ 1-0-3-0, ಆರ್. ಅಶ್ವಿನ್ 9-0-37-0, ರೋಹಿತ್ ಶರ್ಮ 6-0-23-0, ಸುರೇಶ್ ರೈನಾ 2-0-12-0, ಮನೋಜ್ ತಿವಾರಿ 1-0-14-0

ಫಲಿತಾಂಶ: ಭಾರತಕ್ಕೆ 20 ರನ್ ಜಯ; 4-1 ರಲ್ಲಿ ಸರಣಿ ಗೆಲುವು, ಪಂದ್ಯಶ್ರೇಷ್ಠ: ಇರ್ಫಾನ್ ಪಠಾಣ್; ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.