ರೊಸೀವ್, ಡೊಮಿನಿಕಾ (ಎಎಫ್ಪಿ): ವೇಗಿಗಳಾದ ಮಿಷೆಲ್ ಜಾನ್ಸನ್ (3ಕ್ಕೆ 34) ಮತ್ತು ಜೋಶ್ ಹ್ಯಾಜ್ಲೆವುಡ್ (3ಕ್ಕೆ33) ಅವರ ಪರಿಣಾಮಕಾರಿ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ಆರಂಭವಾದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ವಿಂಡ್ಸರ್ ಪಾರ್ಕ್ ಕ್ರೀಡಾಂಗಣದಲ್ಲಿ ಬುಧವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ನಲ್ಲಿ 53.5 ಓವರ್ಗಳಲ್ಲಿ 148ರನ್ಗಳಿಗೆ ಆಲೌಟ್ ಆಯಿತು.

ಪ್ರಥಮ ಇನಿಂಗ್ಸ್ ಆರಂಭಿಸಿ ರುವ ಪ್ರವಾಸಿ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 30 ಓವರ್ಗಳಲ್ಲಿ 3 ವಿಕೆಟ್ಗೆ 85 ರನ್ ಗಳಿಸಿದ್ದು 63ರನ್ಗಳ ಹಿನ್ನಡೆಯಲ್ಲಿದೆ.

ಆಘಾತ: ಬ್ಯಾಟಿಂಗ್ ನಡೆಸಿದ ವಿಂಡೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 23 ರನ್ ಆಗಿದ್ದಾಗ ಆರಂಭಿಕ ಆಟಗಾರ ಕ್ರೆಗ್ ಬ್ರಾಥ್ವೈಟ್ (10) ವಿಕೆಟ್ ಒಪ್ಪಿಸಿದರು.

ದಿನದ ಆರನೇ ಓವರ್ನ ಕೊನೆಯ ಎಸೆತದಲ್ಲಿ ಬ್ರಾಥ್ವೈಟ್ ವಿಕೆಟ್ ಕಬ ಳಿಸಿದ ಜೋಶ್ ಹಜ್ಲೆವುಡ್ ಆಸ್ಟ್ರೇಲಿಯಾ ತಂಡಕ್ಕೆ ಮೇಲುಗೈ ತಂದಿತ್ತರು.

ಬಳಿಕ ಬಂದ ಎಡಗೈ ಬ್ಯಾಟ್ಸ್ಮನ್ ಡರೆನ್ ಬ್ರಾವೊ (19) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕ್ರಿಸ್ ಲಿಯೊನ್ ಬೌಲಿಂಗ್ನಲ್ಲಿ ಅವರು ಮೈಕಲ್ ಕ್ಲಾರ್ಕ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಹಂತದಲ್ಲಿ ಜತೆಯಾದ ಶಾಯ್ ಹೋಪ್ (36; 54ಎ, 5ಬೌಂ) ಮತ್ತು ಶೇನ್ ಡೌರಿಚ್ (15) ಆಸ್ಟ್ರೇಲಿಯಾ ಬೌಲರ್ಗಳನ್ನು ಕೆಲಕಾಲ ಸಮರ್ಥವಾಗಿ ಎದುರಿಸಿ ನಿಂತರು. ಹೀಗಿದ್ದರೂ ಸರಾಗ ವಾಗಿ ರನ್ ಮಾತ್ರ ದಾಖಲಾಗಲಿಲ್ಲ. 22 ಎಸೆತಗಳನ್ನು ಎದುರಿಸಿದ ಈ ಜೋಡಿ 12 ರನ್ ಗಳಿಸಲಷ್ಟೇ ಶಕ್ತವಾಯಿತು. ಮಿಷೆಲ್ ಜಾನ್ಸನ್ ಮತ್ತು ಹ್ಯಾಜ್ಲೆವುಡ್ ಕ್ರಮವಾಗಿ ಹೋಪ್ ಮತ್ತು ಡೌರಿಚ್ ವಿಕೆಟ್ ಕಬಳಿಸಿ ಈ ಜೋಡಿಯನ್ನು ಮುರಿದರು.

ಕುಸಿತದ ಹಾದಿ: ಹೋಪ್ ಮತ್ತು ಡೌರಿಚ್ ಔಟಾಗುತ್ತಿದ್ದಂತೆ ವೆಸ್ಟ್ ಇಂಡೀಸ್ ಕುಸಿತದ ಹಾದಿ ಹಿಡಿಯಿತು. ಅನುಭವಿ ಮರ್ಲಾನ್ ಸ್ಯಾಮುಯೆಲ್ಸ್ (7), ಜರ್ಮೈನ್ ಬ್ಲಾಕ್ವುಡ್ (2), ಜೆರೊಮ್ ಟೇಲರ್ (6) ಮತ್ತು ಶಾನನ್ ಗೇಬ್ರಿಯಲ್ (2) ಜಿದ್ದಿಗೆ ಬಿದ್ದವರ ಹಾಗೆ ವಿಕೆಟ್ ಒಪ್ಪಿಸಿದರು.

ಆಸರೆ: ಒಂದೆಡೆ ವಿಕೆಟ್ ಉರುಳುತ್ತಿದ್ದರು ತಾಳ್ಮೆಯ ಆಟ ಆಡಿದ ದಿನೇಶ್ ರಾಮ್ದಿನ್ (19) ಮತ್ತು ಜಾಸನ್ ಹೋಲ್ಡರ್ (21; 42ಎ, 3ಬೌಂ) ತಂಡಕ್ಕೆ ಆಸರೆಯಾದರು. ಇವರಿಬ್ಬರು 7ನೇ ವಿಕೆಟ್ಗೆ 8.4 ಓವರ್ಗಳಲ್ಲಿ 30 ರನ್ ಗಳಿಸಿದ್ದರಿಂದ ತಂಡ 140ರ ಗಡಿ ದಾಟಿತು.

ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (8) ಅವರನ್ನು ಬೇಗನೇ ಕಳೆದುಕೊಂಡಿತು. ಶಾನ್ ಮಾರ್ಷ್ (19) ಮತ್ತು ನಾಯಕ ಮೈಕಲ್ ಕ್ಲಾರ್ಕ್ (18) ಕೂಡಾ ಬೇಗನೇ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್:  ವೆಸ್ಟ್ ಇಂಡೀಸ್: ಮೊದಲ ಇನಿಂಗ್ಸ್: 53.5 ಓವರ್ಗಳಲ್ಲಿ 148 (ಶಾಯ್ ಹೋಪ್ 36, ಡರೆನ್ ಬ್ರಾವೊ 19, ದಿನೇಶ್ ರಾಮ್ದಿನ್ 19, ಜಾಸನ್ ಹೋಲ್ಡರ್ 21; ಮಿಷೆಲ್ ಜಾನ್ಸನ್ 3ಕ್ಕೆ34, ಜೋಶ್ ಹಜ್ಲೆವುಡ್ 3ಕ್ಕೆ33, ಮಿಷೆಲ್ ಸ್ಟಾರ್ಕ್ 2ಕ್ಕೆ48, ಸ್ಟೀವನ್ ಸ್ಮಿತ್ 2ಕ್ಕೆ1). ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್: 30 ಓವರ್ಗಳಲ್ಲಿ ಮೂರು ವಿಕೆಟ್ಗೆ 85 ( ಡೇವಿಡ್ ವಾರ್ನರ್ 8, ಶಾನ್ ಮಾರ್ಷ್ 19, ಮೈಕಲ್ ಕ್ಲಾರ್ಕ್ 18).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.